ಸಿಧುಗೆ ಷೋಕಾಸ್‌ ನೋಟಿಸ್‌

ಸೋಮವಾರ, ಮೇ 20, 2019
31 °C

ಸಿಧುಗೆ ಷೋಕಾಸ್‌ ನೋಟಿಸ್‌

Published:
Updated:
Prajavani

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತಿರಸ್ಕಾರ ಭಾವನೆಯ ಹೇಳಿಕೆ ನೀಡಿದ್ದು, ಮೇಲ್ನೋಟಕ್ಕೆ ನೀತಿಸಂಹಿತೆ ಉಲ್ಲಂಘನೆ ಎಂದು ಕಂಡುಬಂದ ಹಿನ್ನೆಲೆಯಲ್ಲಿ ಚುನಾವನಾ ಆಯೋಗ ಕಾಂಗ್ರೆಸ್ ಮುಖಂಡ ನವಜೋತ್‌ ಸಿಂಗ್ ಸಿಧು ಅವರಿಗೆ ಷೋಕಾಸ್ ನೋಟಿಸ್‌ ಜಾರಿ ಮಾಡಿದೆ.

ಮಧ್ಯಪ್ರದೇಶದಲ್ಲಿ ಏಪ್ರಿಲ್‌ 29ರಂದು ಮಾಡಿದ ಭಾಷಣದಲ್ಲಿ ಸಿಧು ಅವರು, ‘ರಫೇಲ್‌ ಜೆಟ್‌ ಖರೀದಿ ವಹಿವಾಟಿನಲ್ಲಿ ಮೋದಿ ಅವರು ಹಣ ಮಾಡುತ್ತಿದ್ದಾರೆ,  ಬ್ಯಾಂಕ್‌ ಲೂಟಿ ಮಾಡಿ ಪರಾರಿಯಾಗಲು ಸಿರಿವಂತರಿಗೆ ಅವರು ನೆರವು ನೀಡುತ್ತಿದ್ದಾರೆ’ ಎಂದು ಆರೋಪಿಸಿದ್ದರು. ಇದನ್ನು ವಿರೋಧಿಸಿ ಬಿಜೆಪಿಯವರು ಸಿಧು ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.

ಸಿಧು ಮತ್ತೆ ಟೀಕೆ: ಆಯೋಗದ ನೋಟಿಸ್ ನಂತರವೂ ಪ್ರಧಾನಿ ವಿರುದ್ಧ ಟೀಕೆ ಮುಂದುವರಿಸಿರುವ ನವಜ್ಯೋತ್ ಸಿಂಗ್‌ ಸಿಧು, ಪ್ರಧಾನಿ ಅವರನ್ನು ‘ಕಡಿಮೆ ಕೆಲಸ ಮಾಡಿಯೂ ಹೆಚ್ಚು ಮಾಡಿದಂತೆ ಬಿಂಬಿಸಿಕೊಳ್ಳುವ ನವವಧುವಿನಂತೆ’ ಎಂದಿದ್ದಾರೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

  • 3

    Happy
  • 1

    Amused
  • 0

    Sad
  • 0

    Frustrated
  • 2

    Angry

Comments:

0 comments

Write the first review for this !