ಸೋಮವಾರ, ಏಪ್ರಿಲ್ 12, 2021
23 °C
ರಾಜ್ಯಪಾಲರಿಗೆ ಪತ್ರ ರವಾನಿಸಿದ ಅಮರೀಂದರ್‌ ಸಿಂಗ್‌

ಸಿಧು ರಾಜೀನಾಮೆ ಅಂಗೀಕಾರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚಂಡಿಗಡ: ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌, ನವಜೋತ್‌ ಸಿಂಗ್‌ ಸಿಧು ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. 

ಸಚಿವ ಸಂಪುಟ ಸ್ಥಾನಕ್ಕೆ ಸಿಧು ನೀಡಿದ್ದ ರಾಜೀನಾಮೆ ಪತ್ರವನ್ನು ಅಧಿಕೃತವಾಗಿ ಅಂಗೀಕರಿಸಲು ರಾಜ್ಯಪಾಲ ವಿ.ಪಿ ಸಿಂಗ್‌ ಬದನೂರ್‌ ಅವರಿಗೆ ಸಿಎಂ ಕಳುಹಿಸಿಕೊಟ್ಟಿದ್ದಾರೆ ಎಂದು ವಕ್ತಾರರೊಬ್ಬರು ತಿಳಿಸಿದರು. ಬುಧವಾರ ದೆಹಲಿಯಿಂದ ವಾಪಾಸಾಗಿದ್ದ ಅಮರಿಂದರ್‌ ಸಿಂಗ್‌, ಶನಿವಾರ ಬೆಳಗ್ಗೆ ರಾಜೀನಾಮೆ ಪತ್ರವನ್ನು ಪರಿಶೀಲಿಸಿದ್ದಾರೆ. ಪತ್ರ ಕೇವಲ ಒಂದು ವಾಕ್ಯದಲ್ಲಷ್ಟೇ ಇತ್ತು. ರಾಜೀನಾಮೆಗೆ ಕಾರಣವಾಗಲಿ ಅಥವಾ ವಿವರಣೆಯಾಗಲಿ ಇರಲಿಲ್ಲ’ ಎಂದು ಅವರು ತಿಳಿಸಿದರು. 

ಮುಖ್ಯಮಂತ್ರಿ ಅಮರಿಂದರ್‌ ಸಿಂಗ್ ಹಾಗೂ ಸಿಧು ನಡುವಿನ ಭಿನ್ನಮತ ಶಮನಕ್ಕೆ ಕಾಂಗ್ರೆಸ್‌ ಹೈಕಮಾಂಡ್‌ ಪ್ರಯತ್ನಿಸುತ್ತಿದೆ ಎನ್ನುವ ಸಂದರ್ಭದಲ್ಲೇ ಅಮರಿಂದರ್‌ ಸಿಂಗ್‌ ರಾಜೀನಾಮೆ ಅಂಗೀಕರಿಸಿದ್ದಾರೆ. ಸ್ಥಳೀಯ ಆಡಳಿತ, ಪ್ರವಾಸೋದ್ಯಮ ಮತ್ತು ಸಂಸ್ಕೃತಿ ವ್ಯವಹಾರಗಳ ಖಾತೆ ಹೊಂದಿದ್ದ ಸಿಧು ಅವರಿಗೆ, ಭಿನ್ನಮತ ತೀವ್ರಗೊಂಡ ಬಳಿಕ ಖಾತೆ ಬದಲಾಯಿಸಲಾಗಿತ್ತು. ಜೂನ್‌ 6ರಂದು ಅವರಿಗೆ ಇಂಧನ ಮತ್ತು ನವೀಕರಿಸಬಹುದಾದ ಇಂಧನ ಖಾತೆ ನೀಡಲಾಗಿತ್ತು. ಸಿಧು ಜತೆಗೆ ಇತರೆ ಸಚಿವರ ಖಾತೆಗಳನ್ನೂ ಬದಲಾಯಿಸಲಾಗಿತ್ತು. 

ಹೊಸ ಖಾತೆ ನೀಡಿ ತಿಂಗಳುಗಳೇ ಕಳೆದಿದ್ದರು, ಸಿಧು ಅಧಿಕಾರ ವಹಿಸಿಕೊಂಡಿರಲಿಲ್ಲ. ಇದರಿಂದ ಅಮರಿಂದರ್‌ ಆಡಳಿತದ ಬಗ್ಗೆ ವಿಪಕ್ಷಗಳು ಟೀಕಿಸಿದ್ದವು. ಜುಲೈ 14ರಂದು ಟ್ವಿಟರ್‌ ಮೂಲಕ ತನ್ನ ರಾಜೀನಾಮೆ ಕುರಿತು ಮಾಹಿತಿ ನೀಡಿದ್ದ ಸಿಧು, ಜೂನ್‌ 10ರಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಗೆ ಕಳುಹಿಸಿದ್ದ ರಾಜೀನಾಮೆ ಪತ್ರವನ್ನು ಪ್ರಕಟಿಸಿದ್ದರು. ಜುಲೈ 15ರಂದು ಅಮರಿಂದರ್‌ ಸಿಂಗ್‌ ದೆಹಲಿಯಲ್ಲಿರುವ ಸಂದರ್ಭದಲ್ಲಿ ರಾಜೀನಾಮೆ ಪತ್ರವನ್ನು ಅಧಿಕೃತ ನಿವಾಸಕ್ಕೂ ಸಿಧು ಕಳುಹಿಸಿದ್ದರು.  

ನಾನೇನೂ ಮಾಡಲು ಸಾಧ್ಯವಿಲ್ಲ!: ರಾಜೀನಾಮೆ ಕುರಿತು ವಾರದ ಇತ್ತೀಚೆಗೆ ಪ್ರತಿಕ್ರಿಯೆ ನೀಡಿದ್ದ ಅಮರಿಂದರ್‌, ‘ಇಲಾಖೆಯ ಜವಾಬ್ದಾರಿ ಹೊತ್ತುಕೊಳ್ಳಲು ಸಿಧು ಅವರಿಗೆ ಇಷ್ಟವಿಲ್ಲದೇ ಇದ್ದಲ್ಲಿ ನಾನೇನೂ ಮಾಡಲು ಸಾಧ್ಯವಿಲ್ಲ’ ಎಂದಿದ್ದರು. ಇಂಧನ ಇಲಾಖೆಗೆ ಸಚಿವರ ಅನುಪಸ್ಥಿತಿಯಲ್ಲಿ ಸ್ವತಃ ಅಮರಿಂದರ್‌ ಇಲಾಖೆಯ ಜವಾಬ್ದಾರಿ ಹೊತ್ತಿದ್ದರು.   

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು