ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಂಕಿತ ಸಿಮಿ ಉಗ್ರ ಅಲಿ ಬಂಧನ

Last Updated 12 ಅಕ್ಟೋಬರ್ 2019, 20:00 IST
ಅಕ್ಷರ ಗಾತ್ರ

ರಾಯಪುರ: ಸಿಮಿ ಸಂಘಟನೆಯ ಶಂಕಿತ ಕಾರ್ಯಕರ್ತ ಅಜರುದ್ದಿನ್‌ ಅಲಿಯಾಸ್‌ ಅಜರ್‌ ಅಲಿಯಾಸ್‌ ಕೆಮಿಕಲ್‌ ಅಲಿ ಎಂಬಾತನನ್ನು ಛತ್ತೀಸಗಡ ಪೊಲೀಸರು ಹೈದರಾಬಾದ್‌ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಸೌದಿ ಅರೇಬಿಯಾದಿಂದ ಬಂದಿಳಿದ ಕೂಡಲೇ ಬಂಧಿಸಲಾಯಿತು ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. 2013 ರಲ್ಲಿ ನಡೆದ ಬೋಧಗಯಾ ಮತ್ತು ಪಟ್ನಾ ಬಾಂಬ್ ಸ್ಫೋಟ ಪ್ರಕರಣದಲ್ಲಿ ಈತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದರು.

ರಾಯಪುರ ನಿವಾಸಿಯಾಗಿದ್ದ ಅಲಿ ಆರು ವರ್ಷಗಳಿಂದ ಪೊಲೀಸರಿಂದ ತಪ್ಪಿಸಿಕೊಂಡಿದ್ದ. ಬಿಹಾರದಲ್ಲಿ ನಡೆದ ಸ್ಫೋಟದ ನಂತರ ಇವನ ಪತ್ತೆಗೆ ಬಲೆ ಬೀಸಲಾಗಿತ್ತು ಎಂದು ರಾಯಪುರದ ಹಿರಿಯ ಪೊಲೀಸ್ ಅಧಿಕಾರಿ ಆರೀಫ್‌ ಶೇಖ್‌ ತಿಳಿಸಿದ್ದಾರೆ.

‘ನಿರ್ದಿಷ್ಟ ಮಾಹಿತಿ ಆಧರಿಸಿ ಛತ್ತೀಸಗಡ ಪೊಲೀಸರು ಮತ್ತು ಭಯೋತ್ಪಾದನಾ ನಿಗ್ರಹ ದಳ ಜಂಟಿಯಾಗಿ ಅಲಿಯನ್ನು ಬಂಧಿಸಿವೆ’ ಎಂದು ಹೇಳಿದ್ದಾರೆ. ಬೋಧಗಯಾ ಮತ್ತು ಪಟ್ನಾ ಸ್ಫೋಟದಲ್ಲಿ ಭಾಗಿಯಾದ ಉಗ್ರರು ಉಳಿದುಕೊಳ್ಳಲು ಅಲಿ ವಸತಿ ನೀಡಿದ್ದ ಎಂಬ ಆರೋಪವಿದೆ.ಅಲಿಯಿಂದ ಎರಡು ಡಿಎಲ್‌, ಬೋರ್ಡಿಂಗ್‌ ಪಾಸ್‌ ಮತ್ತು ಮತದಾರರ ಗುರುತಿನ ಚೀಟಿ ವಶಕ್ಕೆ ಪಡೆಯಲಾಗಿದೆ. ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಿರುವ ಪೊಲೀಸರು ಎರಡು ದಿನ ವಶಕ್ಕೆ ಪಡೆಯುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT