ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಪಾಳ ಮೂಲಕ ಭಾರತ ಪ್ರವೇಶಿಸಿದ ಆರು ಚೀನೀಯರ ಬಂಧನ

Last Updated 8 ನವೆಂಬರ್ 2018, 20:31 IST
ಅಕ್ಷರ ಗಾತ್ರ

ಬಹ್ರೇಚ್‌ (ಉತ್ತರ ಪ್ರದೇಶ): ನೇಪಾಳದ ಮೂಲಕ ಭಾರತ ಪ್ರವೇಶಿಸಿದ ಆರು ಚೀನಿ ಪ್ರಜೆಗಳನ್ನು ಸಶಸ್ತ್ರ ಸೀಮಾ ಬಲದ (ಎಸ್‌ಎಸ್‌ಬಿ) ಯೋಧರು ರುಪೈದಿಹಾ ಗಡಿಯಲ್ಲಿ ತಡೆಹಿಡಿದಿದ್ದಾರೆ.

‘ಇವರಲ್ಲಿ ಇಬ್ಬರು ಮಹಿಳೆಯರು ಸೇರಿದ್ದಾರೆ. ನೇಪಾಳ್‌ಗಂಜ್‌ನಲ್ಲಿರುವ ಬಾಗೇಶ್ವರಿ ದೇವಸ್ಥಾನ ನೋಡಲು ಬಂದಿದ್ದ ಇವರು, ಕೆಲ ಗೊಂದಲಗಳಿಂದ ಬುಧವಾರ ಭಾರತ ಪ್ರವೇಶಿಸಿದ್ದರು’ ಎಂದು ಎಸ್‌ಎಸ್‌ಬಿ ಹಿರಿಯ ಎಸ್ಪಿ ಗೌರವ್ ಗ್ರೋವರ್ ತಿಳಿಸಿದ್ದಾರೆ.

‘ಈ ಆರು ಮಂದಿ ಸಂಶಯಾಸ್ಪದವಾಗಿ ಕಂಡುಬರಲಿಲ್ಲ. ಹೀಗಾಗಿ, ಅವರನ್ನು ಬಂಧಿಸಿಲ್ಲ ಅಥವಾ ವಶಕ್ಕೆ ಪಡೆದಿಲ್ಲ. ಭಾಷೆಯ ಕೊರತೆಯಿಂದ ಅವರ ವಿಚಾರಣೆ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ಇವರೆಲ್ಲರ ಬಳಿ ನೇಪಾಳದ ವೀಸಾ ಇದೆ’ ಎಂದು ಹೇಳಿದ್ದಾರೆ.

ತನಿಖೆ ಮುಗಿಯುವವರೆಗೂ ಭದ್ರತಾ ಕಾರಣಗಳಿಂದ ಇವರ ಹೆಸರನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT