ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜುಲೈ 27ರ ಒಳಗೆ ಭಾರತಕ್ಕೆ ಆರು ರಫೇಲ್‌ ಯುದ್ಧ ವಿಮಾನ

Last Updated 29 ಜೂನ್ 2020, 14:44 IST
ಅಕ್ಷರ ಗಾತ್ರ

ನವದೆಹಲಿ: ಚೀನಾ ಜೊತೆಗಿನ ಗಡಿ ಸಂಘರ್ಷದ ಬೆನ್ನಲ್ಲೇ ಕಟ್ಟೆಚ್ಚರದಲ್ಲಿರುವ ಭಾರತೀಯ ವಾಯುಪಡೆಯ ಬತ್ತಳಿಕೆಗೆ ಜುಲೈ 27ರೊಳಗಾಗಿ ಮೊದಲ ಹಂತದಲ್ಲಿ ಆರು ರಫೇಲ್‌ ಯುದ್ಧ ವಿಮಾನಗಳು ಹಸ್ತಾಂತರವಾಗುವ ಸಾಧ್ಯತೆ ಇದೆಎಂದು ಮೂಲಗಳು ತಿಳಿಸಿವೆ.

ರಫೇಲ್‌ ಯುದ್ಧ ವಿಮಾನದ ಮೊದಲ ಸ್ಕ್ವಾಡ್ರನ್‌ ಅಂಬಾಲ ವಾಯುನೆಲೆಯಲ್ಲಿ ಇರಲಿದ್ದು, ರಫೇಲ್‌ ಸೇರ್ಪಡೆಯಿಂದ ವಾಯುಪಡೆಯ ಬಲ ಮತ್ತಷ್ಟು ಹೆಚ್ಚಲಿದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ₹58 ಸಾವಿರ ಕೋಟಿ ವೆಚ್ಚದಲ್ಲಿ 36 ರಫೇಲ್‌ ಯುದ್ಧ ವಿಮಾನಗಳನ್ನು ಖರೀದಿಸಲು 2016 ಸೆಪ್ಟೆಂಬರ್‌ನಲ್ಲಿ ಭಾರತ ಹಾಗೂ ಫ್ರಾನ್ಸ್‌ ಒಪ್ಪಂದ ಮಾಡಿಕೊಂಡಿತ್ತು.

ಜೂನ್‌ 2ರಂದು ರಕ್ಷಣಾ ಸಚಿವ ರಾಜ‌ನಾಥ್‌ ಸಿಂಗ್‌ ಹಾಗೂ ಫ್ರಾನ್ಸ್‌ ರಕ್ಷಣಾ ಸಚಿವೆ ಫ್ಲಾರೆನ್ಸ್‌ ಪಾರ್ಲೆ ಅವರ ಜೊತೆ ದೂರವಾಣಿ ಮಾತುಕತೆ ನಡೆಸಿದ್ದರು. ಕೋವಿಡ್‌–19 ಪಿಡುಗಿನಿಂದ ಫ್ರಾನ್ಸ್‌ ತತ್ತರಿಸಿದ್ದರೂ, ನಿಗದಿತ ಅವಧಿಯೊಳಗೇ ಎಲ್ಲ ಯುದ್ಧ ವಿಮಾನಗಳನ್ನು ಪೂರೈಸುವ ಭರವಸೆಯನ್ನು ಸಚಿವೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT