ವಾಜಪೇಯಿ ಸ್ಮಾರಕಕ್ಕೆ ಸ್ಥಳ ನಿಗದಿಯಾಗಿಲ್ಲ...

7

ವಾಜಪೇಯಿ ಸ್ಮಾರಕಕ್ಕೆ ಸ್ಥಳ ನಿಗದಿಯಾಗಿಲ್ಲ...

Published:
Updated:

ಯಮುನಾ ದಡದಲ್ಲಿರುವ ‘ರಾಷ್ಟ್ರೀಯ ಸ್ಮೃತಿ ಸ್ಥಳ’ದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಅಂತ್ಯಕ್ರಿಯೆ ನಡೆದಿದೆ. ಈ ಹಿಂದಿನ ರಾಷ್ಟ್ರನಾಯಕರ ಸ್ಮಾರಕಗಳನ್ನು ಯಮುನಾ ದಡದಲ್ಲಿಯೇ ನಿರ್ಮಿಸಲಾಗಿದೆ.

ಆದರೆ ಸ್ಥಳದ ಅಭಾವದ ಕಾರಣ ಯಮುನಾ ದಡದಲ್ಲಿ ಇನ್ನು ಮುಂದೆ ಸ್ಮಾರಕಗಳನ್ನು ನಿರ್ಮಿಸಬಾರದು ಎಂಬ ಪ್ರಸ್ತಾವವನ್ನು 2000ರಲ್ಲಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರವೇ ಮುಂದಿಟ್ಟಿತ್ತು. 2013ರಲ್ಲಿ ಯುಪಿಎ ಸರ್ಕಾರವು ಆ ಪ್ರಸ್ತಾವನ್ನು ಅನುಷ್ಠಾನಕ್ಕೆ ತಂದಿತು.

ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ಪ್ರಧಾನಿಗಳಾಗಿದ್ದವರ ಅಂತ್ಯಸಂಸ್ಕಾರವನ್ನು ನಡೆಸಲು ಯಮುನಾ ದಂಡೆಯಲ್ಲಿ ‘ರಾಷ್ಟ್ರೀಯ ಸ್ಮೃತಿ ಸ್ಥಳ’ವನ್ನು ಸ್ಥಾಪಿಸಲಾಯಿತು.

ಹೀಗಾಗಿ ಅಲ್ಲಿ ವಾಜಪೇಯಿ ಅವರ ಸ್ಮಾರಕ ನಿರ್ಮಿಸಲು ಸಾಧ್ಯವಿಲ್ಲ. ಆದರೆ ಸ್ಮಾರಕವನ್ನು ಎಲ್ಲಿ ನಿರ್ಮಿಸಬೇಕು ಎಂಬುದರ ಬಗ್ಗೆ ಇನ್ನೂ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ.

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !