ಲೋಕಸಭೆ ಮಹಿಳಾ ಮಹಾ ಕಾರ್ಯದರ್ಶಿ ಸೇವೆ ವಿಸ್ತರಣೆ

7

ಲೋಕಸಭೆ ಮಹಿಳಾ ಮಹಾ ಕಾರ್ಯದರ್ಶಿ ಸೇವೆ ವಿಸ್ತರಣೆ

Published:
Updated:
Deccan Herald

ನವದೆಹಲಿ: ಲೋಕಸಭೆಯ ಮೊದಲ ಮಹಿಳಾ ಮಹಾ ಕಾರ್ಯದರ್ಶಿ ಸ್ನೇಹಲತಾ ಶ್ರೀವಾಸ್ತವ್‌ ಅವರ ಸೇವಾವಧಿಯನ್ನು ಸ್ಪೀಕರ್‌ ಸುಮಿತ್ರಾ ಮಹಾಜನ್‌ ಒಂದು ವರ್ಷ ವಿಸ್ತರಣೆ ಮಾಡಿದ್ದಾರೆ.

ಮಧ್ಯ‍ಪ್ರದೇಶ ಕೇಡರ್‌ನ 1982ನೇ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಸ್ನೇಹಲತಾ ಅವರನ್ನು ಕಳೆದ ವರ್ಷ ಸಂಪುಟ ಕಾರ್ಯದರ್ಶಿ ದರ್ಜೆಗೆ ನೇಮಕ ಮಾಡಲಾಗಿತ್ತು.

ಅವರು ಇದೇ 30ರಂದು ನಿವೃತ್ತಿಯಾಗಬೇಕಿತ್ತು. ಇದೀಗ ಅವರು 2019ರ ನವೆಂಬರ್‌ 30ರವರೆಗೆ ಸೇವೆಯಲ್ಲಿ ಮುಂದುವರಿಯಲಿದ್ದಾರೆ ಎಂದು ಲೋಕಸಭೆ ಸಚಿವಾಲಯದ ಅಧಿಸೂಚನೆ ತಿಳಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !