ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲವರು ತಮ್ಮನ್ನು ತಾವು ದೇವರೆಂದುಕೊಂಡಿದ್ದಾರೆ: ಬಿಜೆಪಿ ವಿರುದ್ಧ ರಾವುತ್ ಕಿಡಿ

Last Updated 18 ನವೆಂಬರ್ 2019, 9:06 IST
ಅಕ್ಷರ ಗಾತ್ರ

ನವದೆಹಲಿ: ಶಿವಸೇನಾ ಸಂಸದರಿಗೆ ಸಂಸತ್‌ನಲ್ಲಿ ಪ್ರತಿಪಕ್ಷಗಳ ನಾಯಕರ ಸಾಲಿನಲ್ಲಿ ಆಸನ ವ್ಯವಸ್ಥೆ ಮಾಡಿದ ಬಳಿಕ ಸೇನಾದ ಹಿರಿಯ ನಾಯಕ ಸಂಜಯ್ ರಾವುತ್ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಎನ್‌ಡಿಎ ಎನ್ನುವುದು ಒಂದು ಪಕ್ಷದ ಸ್ವತ್ತಲ್ಲ ಆದರೆ ಕೆಲವರು ತಮ್ಮನ್ನು ತಾವುದೇವರು ಎಂದುಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಪ್ರಜಾಪ್ರಭುತ್ವವನ್ನು ನಾವು ಕಾಪಾಡಿಕೊಳ್ಳಬೇಕು. ಯಾರೇ ಆದರೂ ತಮ್ಮನ್ನು ತಾವು ದೇವರೆಂದು ಪರಿಗಣಿಸಬಾರದು. ಅಹಂನಿಂದಾಗಿ ಮಹಾರಾಷ್ಟ್ರದಲ್ಲಿ ಈಗಿನ ರಾಜಕೀಯ ಪರಿಸ್ಥಿತಿ ಹೀಗಾಗಿದೆ. ನಾಲ್ವರು ಎನ್‌ಡಿಎ ಸಂಸ್ಥಾಪಕರಲ್ಲಿ ನಾವು ಒಬ್ಬರು. ಇದು ಯಾರೊಬ್ಬರಆಸ್ತಿಯಲ್ಲ ಆದರೆ ಕೆಲವರು ಸ್ವಯಂ ಘೋಷಿತ ದೇವರು ಎಂದು ಯೋಚಿಸುತ್ತಿದ್ದಾರೆ ಎಂದು ಹೇಳಿದರು.

ಸುದ್ದಿಸಂಸ್ಥೆ ಎಎನ್‌ಐನೊಂದಿಗೆ ಸೇನಾ ಸಂಸದರಿಗೆ ಪ್ರತಿಪಕ್ಷಗಳ ನಾಯಕರ ಸ್ಥಾನದಲ್ಲಿ ಆಸನ ವ್ಯವಸ್ಥೆ ಕುರಿತು ಮಾತನಾಡಿ, ಒಂದು ವೇಳೆ ನೀವು ಒಪ್ಪಿಕೊಂಡಒಪ್ಪಂದದಿಂದ ಹಿಂದೆ ಸರಿದರೆ ಅದು ಸರಿ ಎನಿಸುವುದಿಲ್ಲ ಎಂದಿದ್ದಾರೆ.

ಬಾಳಾ ಸಾಹೇಬ್ ಠಾಕ್ರೆ ಸೇರಿದಂತೆ ನಾಲ್ವರು ನಾಯಕರು ಎನ್‌ಡಿಎ ಮೈತ್ರಿ ಕೂಟವನ್ನು ರಚಿಸಿದರು. ನಾವು ಹಲವುಬಾರಿ ಎನ್‌ಡಿಎಯನ್ನು ಕಾಪಾಡಿದ್ದೇವೆ. ಎಂದಿಗೂ ಅವರನ್ನೂ ಕೈಬಿಟ್ಟಿರಲಿಲ್ಲ. ಎನ್‌ಡಿಎಯಿಂದ ಸೇನಾವನ್ನು ತೆಗೆಯುವ ಕುರಿತು ಯೋಚಿಸುತ್ತಿದ್ದರೆ ನೀವುದೇವರಲ್ಲ. ಸೇನಾವನ್ನು ಎನ್‌ಡಿಎಯಿಂದ ತೆಗೆಯುವುದು ಕಾರ್ಯಗತವಾಗುವುದಿಲ್ಲ. ಸಂಸತ್ತಿನಲ್ಲಿ ಎಲ್ಲಿ ಕೂರುತ್ತೇವೆ ಎನ್ನುವುದು ವಿಷಯವಲ್ಲ. ಬದಲಿಗೆ ಸೇನಾವು ದೇಶದ ಅಭಿವೃದ್ಧಿಗಾಗಿ ಕೆಲಸ ಮಾಡಲಿದೆ ಎಂದರು.

ರಾಜ್ಯದಲ್ಲಿ ಸರ್ಕಾರ ರಚನೆಯಾಗಲಿದೆ ಮತ್ತು ಶಿವಸೇನಾದವರೇ ಮುಖ್ಯಮಂತ್ರಿಯಾಗುತ್ತಾರೆ. ಮೂರು ಪಕ್ಷಗಳ ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಆಧಾರದ ಮೇಲೆ ಸರ್ಕಾರನಡೆಯುತ್ತದೆ. ಮಹಾರಾಷ್ಟ್ರದಲ್ಲಿಸ್ಥಿರ ಸರ್ಕಾರ ಬರಲಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT