ಮಂಗಳವಾರ, ನವೆಂಬರ್ 12, 2019
27 °C
ಪತ್ರದ ಮೂಲಕ ಧನ್ಯವಾದ ಅರ್ಪಿಸಿ ಸಿಬ್ಬಂದಿಯ ಧೈರ್ಯ, ಸಾಹಸ ಹೊಗಳಿದ ಸೋನಿಯಾಗಾಂಧಿ

ಎಸ್‌ಪಿಜಿ ಮುಖ್ಯಸ್ಥರಿಗೆ ಕೃತಜ್ಞತೆ ತಿಳಿಸಿದ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ

Published:
Updated:

ನವದೆಹಲಿ: ವಿಶೇಷ ಸುರಕ್ಷತಾ ಪಡೆ (ಎಸ್ ಪಿಜಿ) ಭದ್ರತೆ ಹಿಂಪಡೆದ ಕೇಂದ್ರದ ಕ್ರಮದ ಕುರಿತು ಯಾವುದೇ ಪ್ರತಿಕ್ರಿಯೆ ನೀಡದ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಇಲ್ಲಿಯವರೆಗೆ ತಮ್ಮ ಕುಟುಂಬವನ್ನು ರಕ್ಷಿಸಿದ ಸಿಬ್ಬಂದಿಗೆ ಕೃತಜ್ಞತೆ ಅರ್ಪಿಸುತ್ತೇನೆ ಎಂದು ಎಸ್‌ಪಿಜಿ ಮುಖ್ಯಸ್ಥರಿಗೆ ತಿಳಿಸಿದ್ದಾರೆ.

ಶನಿವಾರ ಎಸ್ಪಿಜಿ ಮುಖ್ಯಸ್ಥ ಅರುಣ್ ಸಿನ್ಹಾ ಅವರಿಗೆ ಈ ಸಂಬಂಧ ಪತ್ರ ಬರೆದ ಸೋನಿಯಾಗಾಂಧಿ, ಕಳೆದ 28 ವರ್ಷಗಳಿಂದ ಇಲ್ಲಿಯವರೆಗೆ ಪ್ರತಿದಿನ ನಮ್ಮ ಕುಟುಂಬವನ್ನು ರಕ್ಷಿಸಿದ ತಮ್ಮ ಸಿಬ್ಬಂದಿಗೆ ಕುಟುಂಬದ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ. 

ಇದನ್ನೂ ಓದಿ: ಸೋನಿಯಾಗಾಂಧಿ ಕುಟುಂಬಕ್ಕೆ ನೀಡಿದ್ದ ಭದ್ರತೆ ವಾಪಸ್: ಕಾಂಗ್ರೆಸ್‌ ಟೀಕೆ

ಎಸ್‌ಪಿಜಿ ಪಡೆ ದೇಶದ ಒಂದು ಅತ್ಯುತ್ತಮ ಭದ್ರತಾ ಪಡೆಯಾಗಿದ್ದು, ಎಸ್ ಪಿಜಿ ಪಡೆಯ ಪ್ರತಿಯೊಬ್ಬರಲ್ಲೂ ಧೈರ್ಯ ಮತ್ತು ದೇಶಭಕ್ತಿ ತುಂಬಿದೆ. ಎಸ್‌ಪಿಜಿ ಸಿಬ್ಬಂದಿಯ ವೃತ್ತಿಪರತೆ, ಆತ್ಮವಿಶ್ವಾಸ, ಸಮರ್ಪಣಾ ಮನೋಭಾವ, ವಿವೇಚನೆ ನಿಜಕ್ಕೂ ಮೆಚ್ಚುವಂತಹದ್ದು. ದಿನದ ಪ್ರತಿಯೊಂದು ಹಂತದಲ್ಲೂ ಅವರು ನಮ್ಮ ಕುಟುಂಬದ ರಕ್ಷಣೆಯನ್ನು ನೋಡಿಕೊಂಡಿದ್ದಾರೆ. ಇದಕ್ಕಾಗಿ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ. ಹಾಗೂ ನನ್ನ ಕುಟುಂಬದ ಪರವಾಗಿ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)