ವಿಶಾಗನ್ ವರಿಸಿದ ಸೌಂದರ್ಯ ರಜನಿಕಾಂತ್‌

7

ವಿಶಾಗನ್ ವರಿಸಿದ ಸೌಂದರ್ಯ ರಜನಿಕಾಂತ್‌

Published:
Updated:
Prajavani

ಚೆನ್ನೈ: ಸೂಪರ್‌ಸ್ಟಾರ್ ರಜನಿಕಾಂತ್ ಅವರ ಪುತ್ರಿ ಸೌಂದರ್ಯ ರಜನಿಕಾಂತ್ ಮತ್ತು ನಟ, ಉದ್ಯಮಿ ವಿಶಾಗನ್‌ ಅವರ ವಿವಾಹ ಚೆನ್ನೈನ ಐಷರಾಮಿ ಹೋಟೆಲ್‌ನಲ್ಲಿ ಸೋಮವಾರ ನೆರವೇರಿತು.

ಮುಖ್ಯಮಂತ್ರಿ ಕೆ. ಪಳನಿಸ್ವಾಮಿ, ವಿರೋಧ ಪಕ್ಷದ ನಾಯಕ ಎಂ.ಕೆ.ಸ್ಟಾಲಿನ್‌, ಹಿರಿಯ ನಟ ಕಮಲ್‌ಹಾಸನ್‌ ಸೇರಿದಂತೆ ಅನೇಕ ಗಣ್ಯರು ನವದಂಪತಿಗೆ ಶುಭಹಾರೈಸಿದರು.

ಉದ್ಯಮಿ ಅಶ್ವಿನ್ ಎಂಬುವರನ್ನು ಪ್ರೀತಿಸಿದ್ದ ಸೌಂದರ್ಯ, 2010ರಲ್ಲಿ ಕುಟುಂಬದವರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಅಶ್ವಿನ್ ಜೊತೆಗೆ ಏಳು ವರ್ಷಗಳ ಕಾಲ ಜೀವನ ನಡೆಸಿದ್ದ ಅವರು, ಕಳೆದ ವರ್ಷವಷ್ಟೇ ವಿಚ್ಛೇದನ ಪಡೆದು ದೂರವಾಗಿದ್ದರು. ಅವರಿಗೆ ಐದು ವರ್ಷದ ಮಗ ವೇದ್ ಸಹ ಇದ್ದಾನೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 3

  Frustrated
 • 8

  Angry

Comments:

0 comments

Write the first review for this !