ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಲಸೆ ಕಾರ್ಮಿಕರ ಚಲನವಲನ: ಗೂಡ್ಸ್‌ ರೈಲುಗಳ ವೇಗ ಕಡಿಮೆ ಮಾಡಿದ ಆಗ್ನೇಯ ರೈಲ್ವೆ

Last Updated 11 ಮೇ 2020, 2:55 IST
ಅಕ್ಷರ ಗಾತ್ರ

ಕೋಲ್ಕತ್ತ: ವಲಸೆ ಕಾರ್ಮಿಕರ ಚಲನವಲನದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಆಗ್ನೇಯ ರೈಲ್ವೆಯು ಸೋಮವಾರ ಬೆಳಗ್ಗಿನ ವರೆಗೆ ಸರಕು ಸಾಗಣೆ ರೈಲುಗಳ ವೇಗವನ್ನು ಕಡಿತಗೊಳಿಸಿದೆ.

ಖರಾಗ್‌ಪುರ–ಭದ್ರಕ್ ನಡುವಣ ಸರಕು ಸಾಗಣೆ ರೈಲುಗಳ ವೇಗವನ್ನು ಗಂಟೆಗೆ 40 ಕಿ.ಮೀ ಗೆ ಇಳಿಕೆ ಮಾಡಲಾಗಿದೆ ಎಂದು ಆಗ್ನೇಯ ರೈಲ್ವೆ ಭಾನುವಾರ ಸಂಜೆಯೇ ತಿಳಿಸಿತ್ತು.

ವಲಸೆ ಕಾರ್ಮಿಕರ ಚಲನವಲನದ ಮೇಲೆ ಕಣ್ಗಾವಲಿಡುವಂತೆ ರೈಲ್ವೆ ಸುರಕ್ಷತಾ ಪಡೆಯೂ ಸೇರಿದಂತೆ ಈ ವಲಯದ ಎಲ್ಲ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಹೆಚ್ಚಿನ ಜಾಗರೂಕತೆಯೊಂದಿಗೆ ರೈಲು ಚಲಾಯಿಸುವಂತೆಯೂ ಹೆಚ್ಚು ಬಾರಿ ಹಾರ್ನ್‌ ಮಾಡುವಂತೆಯೂ ಲೊಕೊಪೈಲಟ್‌ಗಳಿಗೆ ಸೂಚಿಸಲಾಗಿದೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.

ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಇತ್ತೀಚೆಗೆ ಹಳಿ ಮೇಲೆ ಮಲಗಿದ್ದ ಕಾರ್ಮಿಕರ ಮೇಲೆ ರೈಲು ಚಲಿಸಿ 16 ಮಂದಿ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT