ಜಮ್ಮು– ಕಾಶ್ಮೀರ ಡಿಜಿಪಿ ಸ್ಥಾನದಿಂದ ಎಸ್.ಪಿ.ವೈದ್ಗೆ ಕೊಕ್

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಸ್ಥಾನದಿಂದ ಎಸ್.ಪಿ.ವೈದ್ ಅವರನ್ನು ಕಿತ್ತು ಹಾಕಲಾಗಿದೆ. ಕಾರಾಗೃಹ ಇಲಾಖೆಯ ಡಿಜಿಪಿಯಾಗಿದ್ದ ದಿಲ್ಬಾಗ್ಸಿಂಗ್ ಅವರಿಗೆ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿದೆ.
ಕಳೆದ ವಾರ ದಕ್ಷಿಣ ಕಾಶ್ಮೀರದಲ್ಲಿ ಮೂರು ಮಂದಿ ಪೊಲೀಸರು ಮತ್ತು ಅವರ ಎಂಟು ಮಂದಿ ಸಂಬಂಧಿಯನ್ನು ಭಯೋತ್ಪಾದಕರು ಅಪಹರಿಸಿದ್ದರು. ಪೊಲೀಸರು ತಮ್ಮ ವಶದಲ್ಲಿದ್ದ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ರಿಯಾಜ್ ನಾಯ್ಕೂನ ತಂದೆ ಹಾಗೂ ಉಗ್ರರ ಹತ್ತಕ್ಕೂ ಹೆಚ್ಚು ಸಂಬಂಧಿಗಳನ್ನು ಬಿಡುಗಡೆಗೊಳಿಸುವಂತೆ ಉಗ್ರರು ಒತ್ತಾಯಿಸಿದ್ದರು. ಈ ಬೇಡಿಕೆ ಈಡೇರಿದ ಬಳಿಕ ತಮ್ಮ ವಶದಲ್ಲಿದ್ದ ಪೊಲೀಸರು ಹಾಗೂ ಅವರ ಸಂಬಂಧಿಗಳನ್ನು ಬಿಡುಗಡೆಗೊಳಿಸಿದ್ದರು.
ಈ ಬೆಳವಣಿಗೆಯೇ ವೈದ್ ಅವರನ್ನು ಕಿತ್ತುಹಾಕಲು ಕಾರಣ ಎನ್ನಲಾಗಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.