ಸೀಟಿಗಾಗಿ ಕಾಂಗ್ರೆಸ್ ಮುಂದೆ ಕೈಯೊಡ್ಡುವುದಿಲ್ಲ: ಮಾಯಾವತಿ

7

ಸೀಟಿಗಾಗಿ ಕಾಂಗ್ರೆಸ್ ಮುಂದೆ ಕೈಯೊಡ್ಡುವುದಿಲ್ಲ: ಮಾಯಾವತಿ

Published:
Updated:

ಲಖನೌ: 2019ರ ಚುನಾವಣೆಯಲ್ಲಿ ಸೀಟಿಗಾಗಿ ಕಾಂಗ್ರೆಸ್ ಮುಂದೆ ಕೈಯೊಡ್ಡುವುದಿಲ್ಲ. ರಾಜಸ್ಥಾನ ಮತ್ತು ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದಂತೆ ನಾವು ಏಕಾಂಗಿಯಾಗಿ ಸ್ಪರ್ಧಿಸುತ್ತೇವೆ ಎಂದು ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.

ಕಾಂಗ್ರೆಸ್ ನಮಗೆ ಇಂತಿಷ್ಟು ಸಂಖ್ಯೆಯ ಸೀಟು ನೀಡುವಲ್ಲಿ ವಿಫಲವಾದರೆ ಬಿಎಸ್‍ಪಿ ಏಕಾಂಗಿಯಾಗಿ ಚುನಾವಣಾ ಕಣಕ್ಕಿಳಿಯಲಿದೆ ಎಂದು ಅವರು ಹೇಳಿದ್ದಾರೆ.

ನವದೆಹಲಿಯ ಬಹುಜನ್ ಪ್ರೇರಣಾ ಕೇಂದ್ರದಲ್ಲಿ ಆಯೋಜಿಸಲಾದ ಬಿಎಸ್‌ಪಿ ಸಂಸ್ಥಾಪಕ ಕಾನ್ಶಿ ರಾಮ್ ಅವರ ಪುಣ್ಯ ತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾಯಾವತಿ ಈ ಮಾತುಗಳನ್ನಾಡಿದ್ದಾರೆ.

ಪರಸ್ಪರ ಮೈತ್ರಿ ಮಾಡಿಕೊಳ್ಳುವುದರ ಬದಲು ಬಿಎಸ್‍ಪಿಯ ಘನತೆಗೆ ಧಕ್ಕೆ ತರಲು ಕಾಂಗ್ರೆಸ್ ಪಕ್ಷವೂ ಬಿಜೆಪಿ ಹಾದಿ ಹಿಡಿದಿದೆ. ನಾವು ಹೇಳಿದಷ್ಟು ಸೀಟುಗಳನ್ನು ನೀಡಲು ಕಾಂಗ್ರೆಸ್ ಮುಂದಾದರೆ ಮಾತ್ರ ನಾವು ಅವರೊಂದಿಗೆ ಮೈತ್ರಿ  ಮಾಡುತ್ತೇವೆ ಎಂದು ಮಾಯಾವತಿ ಹೇಳಿದ್ದಾರೆ.
 

ಬರಹ ಇಷ್ಟವಾಯಿತೆ?

 • 8

  Happy
 • 2

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !