ಮಂಗಳವಾರ, ಅಕ್ಟೋಬರ್ 22, 2019
21 °C

ಮೊದಲ ಗಗನಯಾತ್ರಿ ಅಲೆಕ್ಸಿ ಲಿಯೊನೊವ್‌ ನಿಧನ

Published:
Updated:
Prajavani

ಮಾಸ್ಕೊ: ಸೋವಿಯತ್‌ ಕಾಲದ ಗಗನಯಾತ್ರಿ ಅಲೆಕ್ಸಿ ಲಿಯೊನೊವ್‌ (85) ದೀರ್ಘಕಾಲದ ಅನಾರೋಗ್ಯದಿಂದ ಶುಕ್ರವಾರ ನಿಧನರಾಗಿದ್ದಾರೆ. 1965ರಲ್ಲಿ ಗಗನಯಾತ್ರೆ ಕೈಗೊಂಡ ಮೊದಲ ವ್ಯಕ್ತಿ ಇವರು.

ಗಗನಯಾತ್ರಿ ಸಂಖ್ಯೆ 11’ ಅವರು ನಿಧನರಾಗಿದ್ದಾರೆ ಎಂದು ತಿಳಿಸಲು ದುಃಖವಾಗುತ್ತಿದೆ. ಇವರಿಗೆ ಎರಡು ಬಾರಿ ದೇಶದ ಅತ್ಯುನ್ನತ ‘ದಿ ಹೀರೊ ಆಫ್‌ ದಿ ಸೋವಿಯತ್‌ ಯೂನಿಯನ್‌ ಗೌರವ’ ಲಭಿಸಿತ್ತು ಎಂದು ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೊಸ್‌ಕೋಸ್ಮೋಸ್‌ ತಿಳಿಸಿದೆ. 

ವೊಸ್ಕೋಡ್‌ 2 ಬಾಹ್ಯಾಕಾಶ ನೌಕೆ ಉಡಾವಣೆಯಲ್ಲಿಯೂ ಇವರು ಮಹತ್ವದ ಪಾತ್ರ ವಹಿಸಿ, ಇತಿಹಾಸ ನಿರ್ಮಿಸಿದ್ದರು. ಉಪಗ್ರಹ ಮರಳಿ ಭೂಮಿಗೆ ಬರುವಾಗ ಸೈಬಿರಿಯನ್‌ ದಟ್ಟ ಅರಣ್ಯದಲ್ಲಿ ಬಿದ್ದು ದುರಂತ ಅಂತ್ಯ ಕಂಡಿತ್ತು. ಈ ಅಪಘಾತದಲ್ಲಿ ಅವರ ಸಹಾಯಕ ಮೃತಪಟ್ಟಿದ್ದರು. 

 

 

 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)