ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊವಿಡ್-19 ನಿರ್ಮೂಲನಕ್ಕೆ ಪ್ರಧಾನಿಯವರಿಂದ ವಿಶೇಷ ತಂಡ ರಚನೆ: ಜೋಶಿ

Last Updated 20 ಮಾರ್ಚ್ 2020, 13:06 IST
ಅಕ್ಷರ ಗಾತ್ರ

ನವದೆಹಲಿ: ಚೀನಾದಲ್ಲಿ ಕೊರೊನಾ ವೈರಸ್ ಹಾವಳಿ ಆರಂಭವಾದ ದಿನದಿಂದಲೇ ಪ್ರಧಾನಿ ನರೇಂದ್ರ ಮೋದಿ ಕೇಂದ್ರಸಚಿವರ ಸಭೆ ನಡೆಸಿ ಅಧಿಕಾರಿಗಳ ತಂಡ ರಚಿಸಿ ಕೋವಿಡ್ -19 ಹರಡುವಿಕೆಯ ಕುರಿತು ಎಚ್ಚರವಹಿಸುವಂತೆ ತಿಳಿಸಿದ್ದಾರೆಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.

ಚೀನಾದಲ್ಲಿ ಕೋವಿಡ್ -19 ಪ್ರಕರಣಗಳು ವರದಿಯಾದ ದಿನವೇ ಪ್ರಧಾನಿ ನರೇಂದ್ರ ಮೋದಿ ಅವರು ಸಚಿವರಿಗೆ ಇದರ ಗಂಭೀರತೆಯನ್ನು ತಿಳಿಸಿದ್ದಾರೆ. ಅಲ್ಲದೆ, ಆರಂಭದಿಂದಲೂ ಈ ರೋಗಾಣುವಿನ ಕುರಿತುವೈಯಕ್ತಿಕವಾಗಿ ಪರಿಶೀಲಿಸಿ ವರದಿ ತರಿಸಿಕೊಳ್ಳುತ್ತಿದ್ದಾರೆ. ಅಲ್ಲದೆ, ರೋಗದ ಹರಡುವಿಕೆ, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಅಧಿಕಾರಿಗಳ ತಂಡ ರಚಿಸಿ ಮುಂದಾಗುವ ಅನಾಹುತವನ್ನು ತಡೆಗಟ್ಟುವಂತೆ ಸೂಚಿಸಿದ್ದಾರೆ ಎಂದರು.

ಆರಂಭದಲ್ಲಿಯೇ ಈ ರೋಗ ವಿಶ್ವಕ್ಕೇ ಅಪಾಯಕಾರಿ ಎಂಬುದನ್ನು ತಿಳಿಸಿದ್ದರು. ಅದರಂತೆ ಅಧಿಕಾರಿಗಳು ಎಲ್ಲಾ ರಾಜ್ಯಗಳ ಆರೋಗ್ಯ ಇಲಾಖೆಗಳಿಗೆ ಸೂಚನೆ ನೀಡಿರುವುದಲ್ಲದೆ, ಕೇಂದ್ರದಿಂದ ಯಾವ ಸಹಾಯ ಬೇಕೋ ಅದನ್ನು ಒದಗಿಸಿಕೊಟ್ಟಿದ್ದಾರೆ ಎಂದರು.

ಪ್ರಧಾನಿ ಮೋದಿ ಅವರ ಆದೇಶದಂತೆ ಆರಂಭದದಿನದಿಂದಲೂ ದೇಶದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ಪ್ರಕ್ರಿಯೆ ನಡೆಯುತ್ತಿದೆ. ಆಂತರರಾಷ್ಟ್ರೀಯ ವಿಮಾನನಿಲ್ದಾಣಗಳಲ್ಲಿಯೂ ಈ ಕ್ರಮ ಅನುಸರಿಸಲಾಗುತ್ತಿದೆ ಎಂದರು.

ಎಲ್ಲಾ ಸಂಸದರಿಗೆ ಪತ್ರದ ಮೂಲಕ ವಿನಂತಿಸಿರುವ ಪ್ರಧಾನಿ ಮೋದಿ ಅವರು,ಈ ರೋಗದ ತೀವ್ರಗತಿಯಲ್ಲಿ ಹರಡುವುದನ್ನು ತಪ್ಪಿಸಲುಮಾರ್ಚ್ 22ರಂದು ಕರೆ ನೀಡಿರುವ ಜನತಾ ಕರ್ಫ್ಯೂ ಆದೇಶವನ್ನು ಪಾಲಿಸೋಣ. ಆ ಮೂಲಕ ಕೊವಿಡ್ -19 ನಿರ್ಮೂಲನೆ ಮಾಡೋಣ. ವೈರಸ್ ಅನ್ನು ದೇಶದಿಂದ ತೊಲಗಿಸೋಣ ಎಂದಿದ್ದಾರೆ. ಈ ಸಂದರ್ಭದಲ್ಲಿ ಸಂಸದರು ತಮ್ಮ ತಮ್ಮ ಕ್ಷೇತ್ರಗಳಿಗೆ ತೆರಳಿ ಅಲ್ಲಿನ ಜನರಲ್ಲಿ ಕೊವಿಡ್ -19 ಕುರಿತು ಜಾಗೃತಿ ಮೂಡಿಸಬೇಕು. ಹೆಚ್ಚಿನ ಜನರು ಸೇರದಂತೆ ತಿಳಿವಳಿಕೆ ನೀಡಬೇಕು. ಆ ಮೂಲಕ ಭಾನುವಾರ ನಾವೆಲ್ಲರೂ ಈ ರೋಗದಿಂದ ಬಳಲುತ್ತಿರುವವರ ಸೇವೆಯಲ್ಲಿ ತೊಡಗಿರುವ ವೈದ್ಯರು, ನರ್ಸ್‌‌ಗಳನ್ನುಅಭಿನಂದಿಸೋಣ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT