ಗುರುವಾರ , ನವೆಂಬರ್ 21, 2019
21 °C

ಶ್ರೀನಗರದಲ್ಲಿ ಗ್ರೆನೇಡ್‌ ದಾಳಿ: ಒಬ್ಬ ಸಾವು

Published:
Updated:
Prajavani

ಶ್ರೀನಗರ: ಇಲ್ಲಿನ ಜನನಿಬಿಡ ಹರಿ ಸಿಂಗ್‌ ಸ್ಟ್ರೀಟ್‌ ಮಾರುಕಟ್ಟೆಯಲ್ಲಿ ಉಗ್ರರು ನಡೆಸಿದ ಗ್ರೆನೇಡ್‌ ದಾಳಿಯಲ್ಲಿ ಒಬ್ಬ ಮೃತಪಟ್ಟಿದ್ದು, 35 ಮಂದಿ ಗಾಯಗೊಂಡಿದ್ದಾರೆ.

ಜಮ್ಮ ಮುತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ ಮೂರು ತಿಂಗಳ ನಂತರ ನಡೆದ ಎರಡನೆಯ ದಾಳಿ ಇದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ವ್ಯಕ್ತಿಯನ್ನು ಶಹರಾನಾಪುರ ವಾಸಿ 40 ವರ್ಷದ ರಿಂಕು ಸಿಂಗ್ ಎಂದು ಎಂದು ಗುರುತಿಸಲಾಗಿದೆ.

ಗಾಯಗೊಂಡ 35 ಜನರನ್ನು ಇಲ್ಲಿನ  ಎಸ್‌ಎಂಎಚ್‌ಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಕ್ಟೋಬರ್‌ 12ರಂದು ಇದೇ ಪ್ರದೇಶದಲ್ಲಿ ನಡೆದ ಗ್ರೆನೇಡ್‌ ದಾಳಿಯಲ್ಲಿಯೂ ಏಳು ಮಂದಿ ಗಾಯಗೊಂಡಿದ್ದರು.

ದಾಳಿ ನಡೆದ ತಕ್ಷಣವೇ ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿವೆ.

 

ಪ್ರತಿಕ್ರಿಯಿಸಿ (+)