ಭಾನುವಾರ, ಆಗಸ್ಟ್ 25, 2019
20 °C

ತಾರಾ ಹೋಟೆಲುಗಳಲ್ಲಿ ವಿಪರೀತ ದರ: ಸ್ಪಷ್ಟನೆ ಕೇಳಲಿರುವ ಕೇಂದ್ರ

Published:
Updated:

ನವದೆಹಲಿ: ಐಷಾರಾಮಿ ಹೋಟೆಲು ಗಳಲ್ಲಿ ಬಾಳೆ ಹಣ್ಣು ಮತ್ತು ಬೇಯಿಸಿದ ಮೊಟ್ಟೆಗೆ ಭಾರಿ ದರ ವಿಧಿಸುವುದು ‘ಅನ್ಯಾಯ’ ಎಂದು ಕೇಂದ್ರ ಸರ್ಕಾರ ಹೇಳಿದೆ.

ಈ ವಿಚಾರವನ್ನು ಚಿಲ್ಲರೆ ಮಾರಾಟ ದರ ಅಥವಾ ಗ್ರಾಹಕ ರಕ್ಷಣಾ ಮಸೂದೆ ಕಾನೂನಿನ ವ್ಯಾಪ್ತಿಯೊಳಗೆ ತರಲು ಸಾಧ್ಯವೇ ಎಂದು ಪರಿಶೀಲಿಸುವುದಾಗಿ ಗ್ರಾಹಕ ವ್ಯವಹಾರಗಳ ಸಚಿವ ರಾಮವಿಲಾಸ್‌ ಪಾಸ್ವಾನ್‌ ಹೇಳಿದ್ದಾರೆ. 

ಐಷಾರಾಮಿ ಹೋಟೆಲುಗಳಲ್ಲಿ ಸೇವೆ, ಆ್ಯಂಬಿಯೆನ್ಸ್‌, ಹವಾನಿಯಂತ್ರಣ ವ್ಯವಸ್ಥೆ ಮುಂತಾದವುಗಳಿಗೆ ವಿಧಿ ಸುವ ಶುಲ್ಕದ ದರ ಎಷ್ಟು ಎಂಬ ಮಾಹಿತಿ ಯನ್ನು ರಾಜ್ಯ ಸರ್ಕಾರಗಳ ಮೂಲಕ ಸಂಗ್ರಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಹೀಗೆ ಮಾಡುವುದರಿಂದ ಹೋಟೆಲು ಉದ್ಯಮಕ್ಕೆ ಕಿರುಕುಳ ನೀಡಿದಂತಾಗುವುದಿಲ್ಲವೇ ಎಂಬ ಪ್ರಶ್ನೆಗೆ ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ಅವಿನಾಶ್‌ ಕುಮಾರ್‌ ಶ್ರೀವಾಸ್ತವ ಉತ್ತರಿಸಿದ್ದಾರೆ.

ಬೇಯಿಸಿದ ಎರಡು ಮೊಟ್ಟೆಗಳಿಗೆ ₹1,700 ದರ ವಿಧಿಸುವುದನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಹೇಳಿದರು. 

ಎರಡು ಬಾಳೆ ಹಣ್ಣುಗಳಿಗೆ ₹442 ದರ ವಿಧಿಸಿದ್ದ ಚಂಡಿಗಡದ ಐಷಾರಾಮಿ ಹೋಟೆಲ್‌ನ ಬಿಲ್‌ನ ಚಿತ್ರವನ್ನು ನಟ ರಾಹುಲ್ ಬೋಸ್‌ ಅವರು ಟ್ವಿಟರ್‌ ಮೂಲಕ ಕಳೆದ ವಾರ ಬಹಿರಂಗಪಡಿಸಿದ್ದರು.

ಇದು ಭಾರಿ ಚರ್ಚೆಗೆ ಕಾರಣವಾಗಿತ್ತು. ಮುಂಬೈನ ಹೋಟೆಲೊಂದರಲ್ಲಿ ಬೇಯಿಸಿದ ಎರಡು ಮೊಟ್ಟೆಗಳಿಗೆ ₹1,700 ದರ ವಿಧಿಸಿದ್ದು ಭಾನುವಾರ ಸುದ್ದಿಯಾಗಿತ್ತು. 

ವಿಪರೀತ ದರ ವಿಧಿಸುವುದು ಸರಿಯಾದ ವ್ಯಾಪಾರ ಪದ್ಧತಿ ಅಲ್ಲ. ಮಾಧ್ಯಮ ವರದಿಗಳಲ್ಲಿ ಉಲ್ಲೇಖವಾಗಿರುವ ಹೋಟೆಲುಗಳಿಂದ ವಿವರಣೆ ಪಡೆಯಲಾಗುವುದು ಎಂದು ಶ್ರೀವಾಸ್ತವ ಹೇಳಿದ್ದಾರೆ. 

ಹೋಟೆಲುಗಳ ಸಮರ್ಥನೆ

ಚಂಡಿಗಡದ ಹೋಟೆಲು ಬಾಳೆಹಣ್ಣುಗಳಿಗೆ ₹442 ದರ ವಿಧಿಸಿದ್ದನ್ನು ಭಾರತೀಯ ಹೋಟೆಲು ಮತ್ತು ರೆಸ್ಟೊರೆಂಟ್‌ ಸಂಘಟನೆಗಳ ಒಕ್ಕೂಟವು ಸಮರ್ಥಿಸಿಕೊಂಡಿದೆ. 

ಹೋಟೆಲುಗಳು ಎಂದರೆ ಚಿಲ್ಲರೆ ಮಾರಾಟ ಸ್ಥಳಗಳಲ್ಲ. ಹೋಟೆಲುಗಳಲ್ಲಿ ಸೇವೆ, ಗುಣಮಟ್ಟ, ಪ್ಲೇಟು–ಚಮಚ, ಸ್ವಚ್ಛತೆ, ಆ್ಯಂಬಿಯೆನ್ಸ್‌ ಮತ್ತು ಐಷಾರಾಮಿ ವ್ಯವಸ್ಥೆಗಳೆಲ್ಲವೂ ಇರುತ್ತವೆ ಎಂದು ಒಕ್ಕೂಟ ಹೇಳಿದೆ.

 

Post Comments (+)