7

ನೀರಿನ ಉಳಿತಾಯಕ್ಕೆ ‘ಸ್ಮಾರ್ಟ್‌ ವಾಶ್‌ಬೇಸಿನ್’: ವಿದ್ಯಾರ್ಥಿಗಳಿಂದ ಅವಿಷ್ಕಾರ

Published:
Updated:

ಮೊರದಾಬಾದ್‌: ನೀರಿನ ಸಂರಕ್ಷಣೆ ಕುರಿತು ನಿತ್ಯ ಉಪನ್ಯಾಸಗಳು ನಡೆಯುತ್ತಲೇ ಇರುತ್ತವೆ. ಕೇಳುತ್ತೇವೆಯೇ ಹೊರತು ಅದರ ಅನುಷ್ಠಾನಕ್ಕೆ ಮುಂದಾಗುವವರ ಸಂಖ್ಯೆ ಕಡಿಮೆ. 

ಮನೆಯಿಂದ ಹೊರ ನಡೆಯುವಾಗ ನಲ್ಲಿಗಳನ್ನು(ಶೌಚಾಲಯ, ಸ್ನಾನದ ಕೋಣೆ, ವಾಶ್‌ಬೇಸಿನ್‌) ಬಂದ್ ಮಾಡದೆ ಹೋರಟರೆ ಹಿಂದಿರುಗಿ ಬರುವ ವೇಳೆಗೆ ಟ್ಯಾಂಕ್‌ನಲ್ಲಿದ್ದ ಎಲ್ಲಾ ನೀರು ವ್ಯರ್ಥವಾಗಿ ಚರಂಡಿ ಸೇರಿತುತ್ತದೆ.  ಇಂತಹ ಸಂದರ್ಭಗಳು ಎದುರಾದಾಗ ನೆರವಾಗುವ ನಿಟ್ಟಿನಲ್ಲಿ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ‘ಸ್ಮಾರ್ಟ್‌ ವಾಶ್‌ಬೇಸಿನ್‌’ವೊಂದನ್ನು ವಿನ್ಯಾಸಗೊಳಿಸಿದ್ದಾರೆ.

ಈ ಹೊಸ ಮಾದರಿಯನ್ನು ವಿನ್ಯಾಸಗೊಳಿಸಿರುವುದು ಉತ್ತರಪ್ರದೇಶದ ಮೊರದಾಬಾದ್‌ನ ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ತಂಡ.

‘ವಾಶ್‌ಬೇಸಿನ್‌ನಲ್ಲಿ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದ್ದರೆ ಮೊಬೈಲ್‌ಗೆ ಎಚ್ಚರಿಕೆ ಸಂದೇಶ ಕಳುಹಿಸುವ ರೀತಿಯಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಈ ಮೂಲಕ ನೀರು ವ್ಯರ್ಥವಾಗುವುದನ್ನು ತಡೆಯಬಹುದು’ ಎಂದು ವಿದ್ಯಾರ್ಥಿಗಳು ವಿವರಣೆ ನೀಡಿದ್ದಾರೆ.

ವಿದ್ಯಾರ್ಥಿಗಳು ರೂಪಿಸಿರುವ ವಿನ್ಯಾಸಕ್ಕೆ ಪ್ರತಿಕ್ರಿಯಿಸಿ ಟ್ವೀಟ್‌ ಮಾಡಿರುವ ಯು.ಆರ್‌. ಸಮಿ ಎಂಬುವರು, ಒಳ್ಳೆಯ ಅವಿಷ್ಕಾರ. ತಂಡಕ್ಕೆ ಅಭಿನಂದನೆಗಳು. ಆದರೆ, ಇಂಥಹ ಪ್ರಯತ್ನಗಳ ನಿಜವಾದ ಪ್ರಯೋಜನ ಪಡೆಯಲು ದೇಶದಲ್ಲಿ ವಿಶ್ವಾಸಾರ್ಹ ಮತ್ತು ಸ್ಥೀರವಾದ ಮೊಬೈಲ್‌ ಸೇವೆಗಳು ನಮಗೆ ಬೇಕಿದೆ ಎಂದಿದ್ದಾರೆ.  

ಬರಹ ಇಷ್ಟವಾಯಿತೆ?

 • 11

  Happy
 • 1

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !