ನೂತನ ಮಾಹಿತಿ ಆಯುಕ್ತರಾಗಿ ಸುಧೀರ್‌ ಭಾರ್ಗವ ಅಧಿಕಾರ ಸ್ವೀಕಾರ

7

ನೂತನ ಮಾಹಿತಿ ಆಯುಕ್ತರಾಗಿ ಸುಧೀರ್‌ ಭಾರ್ಗವ ಅಧಿಕಾರ ಸ್ವೀಕಾರ

Published:
Updated:
Prajavani

ನವದೆಹಲಿ: ನೂತನ ಮುಖ್ಯ ಮಾಹಿತಿ ಆಯುಕ್ತರಾಗಿ ಸುಧೀರ್‌ ಭಾರ್ಗವ ಅವರು ಮಂಗಳವಾರ ಅಧಿಕಾರ ಸ್ವೀಕರಿಸಿದರು.

ಇದಕ್ಕೂ ಮುನ್ನ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ನೂತನ ಮುಖ್ಯ ಮಾಹಿತಿ ಆಯುಕ್ತ ಸುಧೀರ್‌ ಭಾರ್ಗವ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಭಾರ್ಗವ ಅವರು ಇದುವರೆಗೂ ಮಾಹಿತಿ ಆಯುಕ್ತರಾಗಿದ್ದರು. ನಿವೃತ್ತ ಐಎಫ್‌ಎಸ್‌ ಅಧಿಕಾರಿ ಯಶ್‌ವರ್ಧನ್‌ ಕುಮಾರ್‌ ಸಿನ್ಹಾ, ನಿವೃತ್ತ ಐಆರ್‌ಎಸ್‌ ಅಧಿಕಾರಿ ವನಜಾ ಎನ್‌. ಸರ್ನಾ, ನಿವೃತ್ತ ನೀರಜ್‌ ಕುಮಾರ್‌ ಗುಪ್ತಾ ಹಾಗೂ ಕಾನೂನು ಇಲಾಖೆ ಮಾಜಿ ಕಾರ್ಯದರ್ಶಿ ಸುರೇಶ್‌ ಚಂದ್ರ ಅವರು ಆಯುಕ್ತರಾಗಿ ನೇಮಕಗೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !