ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತ ಲೇಖಕಿ ಸುಜಾತಾ ಗಿಡ್ಲಗೆ ಶಕ್ತಿ ಭಟ್‌ ಪ್ರಶಸ್ತಿ

Last Updated 21 ಅಕ್ಟೋಬರ್ 2018, 17:50 IST
ಅಕ್ಷರ ಗಾತ್ರ

ನವದೆಹಲಿ: ಆಂಧ್ರಪ್ರದೇಶದ ದಲಿತ ಲೇಖಕಿ, ಸದ್ಯ ಅಮೆರಿಕದಲ್ಲಿ ವಾಸವಿರುವಸುಜಾತಾ ಗಿಡ್ಲ ಅವರ ‘ಆ್ಯಂಟ್ಸ್‌ ಅಮಾಂಗ್‌ ಎಲಿಫೆಂಟ್ಸ್‌: ಆ್ಯನ್‌ ಅನ್‌ಟಚಬಲ್‌ ಫ್ಯಾಮಿಲಿ ಅಂಡ್‌ ದಿ ಮೇಕಿಂಗ್‌ ಆಫ್‌ ಮಾಡರ್ನ್‌ ಇಂಡಿಯಾ’ ಕೃತಿಯು ಪ್ರಸಕ್ತ ವರ್ಷದ ಶಕ್ತಿ ಭಟ್‌ ಮೊದಲ ಕೃತಿ ಬಹುಮಾನಕ್ಕೆ ಆಯ್ಕೆಯಾಗಿದೆ.

‘ಪೀಪಲ್ಸ್‌ ವಾರ್‌ ಗ್ರೂಪ್‌’ನ ಸಹ ಸಂಸ್ಥಾಪಕ, ಅವರ ಚಿಕ್ಕಪ್ಪ ಕೆ.ಜಿ. ಸತ್ಯಮೂರ್ತಿಯವರನ್ನು ಕೇಂದ್ರವಾಗಿಟ್ಟುಕೊಂಡು ತಮ್ಮ ಕುಟುಂಬದ ನಾಲ್ಕು ತಲೆಮಾರುಗಳ ಕಥೆಯನ್ನು ಸುಜಾತಾ ಈ ಕೃತಿಯಲ್ಲಿ ಹೇಳಿದ್ದಾರೆ.

ಪ್ರೀತಿ ತನೇಜಾ ಅವರ ‘ವಿ ದಟ್‌ ಆರ್‌ ಯಂಗ್‌’, ದೀಪಕ್‌ ಉನ್ನಿಕೃಷ್ಣನ್‌ ಅವರ ‘ಟೆಂಪರರಿ ಪೀಪಲ್‌’, ಅಂಚಲ್‌ ಮಲ್ಹೋತ್ರಾ ಅವರ ‘ರೆಮ್ನಂಟ್ಸ್‌ ಆಫ್‌ ಎ ಸಪರೇಷನ್‌’, ಸನಂ ಮಹರ್‌ ಅವರ ‘ದಿ ಸೆನ್ಸೇಷನಲ್‌ ಲೈಫ್‌ ಅಂಡ್‌ ಡೆತ್‌ ಆಫ್‌ ಖಂದೀಲ್‌ ಬಲೋಚ್‌’, ಶ್ರೀವತ್ಸ ನೆವಾಟಿಯಾ ಅವರ ‘ಹೌ ಟು ಟ್ರಾವೆಲ್‌ ಲೈಟ್‌’ ಕೂಡ ಅಂತಿಮ ಸುತ್ತಿನಲ್ಲಿದ್ದವು. ಈ ಪೈಕಿ, ಸುಜಾತಾ ಅವರ ಕೃತಿ ಪ್ರಶಸ್ತಿ ಪಡೆಯುವಲ್ಲಿ ಯಶಸ್ವಿಯಾಗಿದೆ.

ಯುವ ಲೇಖಕಿ ಶಕ್ತಿ ಭಟ್‌ ಸ್ಮರಣಾರ್ಥ 2008ರಿಂದ ಈ ಪ್ರಶಸ್ತಿ ನೀಡಲಾಗುತ್ತಿದೆ. ಇದು ₹2 ಲಕ್ಷ ನಗದು ಬಹುಮಾನವನ್ನು ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT