ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನಗೆ ರಾಜಕೀಯದ ಬಗ್ಗೆ ಹೆಚ್ಚು ಗೊತ್ತಿಲ್ಲ, ಆದರೆ ನಾನು ದೇಶಭಕ್ತ: ಸನ್ನಿ ಡಿಯೋಲ್

Last Updated 29 ಏಪ್ರಿಲ್ 2019, 9:22 IST
ಅಕ್ಷರ ಗಾತ್ರ

ಗುರುದಾಸ್‌ಪುರ್ (ಪಂಜಾಬ್): ಬಾಲಿವುಡ್ ನಟ ಸನ್ನಿ ಡಿಯೋಲ್ ಸೋಮವಾರ ಗುರುದಾಸ್‌ಪುರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆ ನಂತರ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಸನ್ನಿ, ನಾನು ಸದಾ ಜನತೆಯ ಪರವಾಗಿರುತ್ತೇನೆ. ನನಗೆ ರಾಜಕೀಯದಬಗ್ಗೆ ಹೆಚ್ಚು ಗೊತ್ತಿಲ್ಲ, ಆದರೆ ನಾನು ದೇಶಭಕ್ತ ಎಂದು ಹೇಳಿದ್ದಾರೆ.

ನಾಮಪತ್ರ ಸಲ್ಲಿಸುವ ಮುನ್ನ ಅಮೃತಸರದಲ್ಲಿರುವ ಸ್ವರ್ಣ ಮಂದಿರಲ್ಲಿ ಗಂಟೆಗಳ ಕಾಲ ಪೂಜೆ ಸಲ್ಲಿಸಿದ್ದಾರೆ ಸನ್ನಿ ಡಿಯೋಲ್.

ನಿಮ್ಮ ಬೆಂಬಲ ಬೇಕು.ನೀವು ನಮಗೆ ಬೆಂಬಲ ನೀಡಿದರೆ, ಗೆಲುವು ನಿಮ್ಮದಾಗಿರುತ್ತದೆ. ಈ ಗೆಲುವು ಪಂಜಾಬ್ ಮತ್ತು ಸುಂದರವಾದ ಗುರುದಾಸ್‌ಪುರದ ಸಹೋದರ ಸಹೋದರಿಯರದ್ದಾಗಿರುತ್ತದೆ ಎಂದು ಸನ್ನಿ ಡಿಯೋಲ್ ಅಪ್ಪ ಧರ್ಮೇಂದ್ರ ಟ್ವೀಟ್ ಮಾಡಿದ್ದಾರೆ.

2004ರಲ್ಲಿ ಧರ್ಮೇಂದ್ರ ಅವರು ಬಿಕಾನೇರ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿಜಯಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT