ಸೋಮವಾರ, ಆಗಸ್ಟ್ 19, 2019
28 °C

28 ದಿನಗಳ ಕಾಲ ಸಂಸತ್ ಕಲಾಪಕ್ಕೆ ಬಂದಿಲ್ಲ ಬಿಜೆಪಿ ಸಂಸದ ಸನ್ನಿ ಡಿಯೋಲ್ 

Published:
Updated:

ನವದೆಹಲಿ: ನಟ, ಗುರುದಾಸ್‌ಪುರ್‌ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಸನ್ನಿ ಡಿಯೋಲ್ ಸಂಸತ್ ಕಲಾಪಕ್ಕೆ 28 ದಿನಗಳ ಕಾಲ ಗೈರು ಹಾಜರಾಗಿದ್ದಾರೆ.

ಲೋಕಸಭೆಯ ಹಾಜರಾತಿ ದಾಖಲೆಗಳನ್ನು ನೋಡಿದರೆ ಸನ್ನಿ ಡಿಯೋಲ್ ಮಾನ್ಸೂನ್ ಅಧಿವೇಶನ ಪುನರಾರಂಭವಾದ ನಂತರ ಸತತ 5 ದಿನಗಳ ಕಾಲ ಸಂಸತ್ ಕಲಾಪಕ್ಕೆ ಹಾಜರಾಗಿದ್ದಾರೆ. ಆಮೇಲೆ ಆ ಕಡೆ ಬರಲೇ ಇಲ್ಲ.

ಸಂಸತ್‌ಗೆ 9 ಬಾರಿ ಹಾಜರಾಗಿದ್ದ ಸನ್ನಿ, ಲೋಕಸಭೆಯಲ್ಲಿ 37 ದಿನಗಳ ಕಾಲ ನಡೆದ ಕಲಾಪದಲ್ಲಿ 28 ದಿನ ಗೈರು ಹಾಜರಾಗಿದ್ದಾರೆ.

ಪಂಜಾಬ್‌ನ ಗುರುದಾಸ್‌ಪುರ್ ಕ್ಷೇತ್ರದಲ್ಲಿ  ಮೊದಲ ಬಾರಿ ಚುನಾವಣೆ ಸ್ಪರ್ಧಿಸಿದ್ದ ಸನ್ನಿ ಡಿಯೋಲ್ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಜಖಾರ್ ಅವರನ್ನು 82,459 ಮತಗಳಿಂದ ಪರಾಭವಗೊಳಿಸಿದ್ದರು.

ಇದನ್ನೂ ಓದಿ: ಪ್ರತಿನಿಧಿ ನೇಮಕ: ಸಂಸದ ಸನ್ನಿ ಡಿಯೋಲ್‌ ವಿರುದ್ಧ ಟೀಕೆ

Post Comments (+)