ಭಾನುವಾರ, ನವೆಂಬರ್ 17, 2019
24 °C

ಅಯೋಧ್ಯೆ ತೀರ್ಪಿನ ಲಾಭವನ್ನು ಮೋದಿ ಸರ್ಕಾರ ಪಡೆಯಬಾರದು: ಶಿವಸೇನಾ

Published:
Updated:
ಉದ್ಧವ್ ಠಾಕ್ರೆ

ಮುಂಬೈ: ಸುಪ್ರೀಂ ಕೋರ್ಟ್‌ನ ಬಹು ನಿರೀಕ್ಷಿತ ಅಯೋಧ್ಯೆ ತೀರ್ಪಿನ ಲಾಭವನ್ನು ಕೇಂದ್ರ ಸರ್ಕಾರ ಪಡೆಯುವಂತಿಲ್ಲ ಎಂದು ಶಿವಸೇನೆ ಹೇಳಿದೆ. 

ಅಯೋಧ್ಯೆಯ ರಾಮ ಜನ್ಮಭೂಮಿ - ಬಾಬ್ರಿ ಮಸೀದಿ ಜಮೀನು ವಿವಾದ ಕುರಿತ ದಶಕಗಳ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಶನಿವಾರ ಬೆಳಗ್ಗೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ವಿವಾದಿತ ಜಾಗ ರಾಮಮಂದಿರ ನಿರ್ಮಾಣಕ್ಕೆ ಮತ್ತು ಸುನ್ನಿ ವಕ್ಫ್ ಮಂಡಳಿಗೆ ಪರ್ಯಾಯ ಜಮೀನು ನೀಡುವಂತೆ ಹೇಳಿದೆ.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದ ಕಾನೂನು ಜಾರಿಗೆ ತರುವಂತೆ ಹಲವು ವರ್ಷಗಳಿಂದಲೂ ಶಿವಸೇನೆ ಆಗ್ರಹಿಸುತ್ತಲೇ ಇತ್ತು. ಆದರೆ ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳಲಿಲ್ಲ. ಇದೀಗ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟವಾಗಿದೆ. ಹೀಗಾಗಿ ಮೋದಿ ಸರ್ಕಾರ ಅಯೋಧ್ಯೆ ತೀರ್ಪಿನ ಲಾಭವನ್ನು ಪಡೆಯುವಂತಿಲ್ಲ ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ತಿಳಿಸಿದ್ದಾರೆ. 

ಅಲಹಾಬಾದ್ ಹೈಕೋರ್ಟ್ 2010ರಲ್ಲಿ ತೀರ್ಪು ನೀಡಿ ಅಯೋಧ್ಯೆಯ 2.77 ಎಕರೆ ವಿವಾದಿತ ಭೂಮಿಯನ್ನು ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾಡ ಮತ್ತು ರಾಮ್ ಲಲ್ಲಾಗೆ ಸಮನಾಗಿ ಹಂಚಲಾಗಿತ್ತು. ಆದರೆ ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿಗೆ 14 ಮೇಲ್ಮನವಿಗಳು ಸಲ್ಲಿಕೆಯಾಗಿದ್ದವು. ಈ ಕುರಿತು ವಿಚಾರಣೆ ನಡೆಸಿದ್ದ ಸುಪ್ರೀಂ ಸಾಂವಿಧಾನಿಕ ಪೀಠ ಶನಿವಾರ ತೀರ್ಪು ಪ್ರಕಟಿಸಿದೆ.

ಇನ್ನಷ್ಟು...

ಅಯೋಧ್ಯೆ ತೀರ್ಪು: ವಿವಾದಿತ ಭೂಮಿ ರಾಮಮಂದಿರಕ್ಕೆ, ಮಸೀದಿಗೆ ಪರ್ಯಾಯ ಜಮೀನು
ತೀರ್ಪಿನ ಬಗ್ಗೆ ಗೌರವ ಇದೆ, ತೃಪ್ತಿಯಿಲ್ಲ: ಸುನ್ನಿ ವಕ್ಫ್‌ ಮಂಡಳಿ ವಕೀಲ ಜಿಲಾನಿ
ಅಯೋಧ್ಯೆ ತೀರ್ಪಿಗೆ ಖುಷಿ, ಮೇಲ್ಮನವಿ ಇಲ್ಲ: ಇಕ್ಬಾಲ್ ಅನ್ಸಾರಿ
ಅಯೋಧ್ಯೆ ತೀರ್ಪು: ಸುಪ್ರೀಂ ಕೋರ್ಟ್‌ ಆದೇಶದ ಮುಖ್ಯಾಂಶಗಳು
 

ಪ್ರತಿಕ್ರಿಯಿಸಿ (+)