ಶನಿವಾರ, ಜುಲೈ 31, 2021
28 °C

ಲಾಕ್‌ಡೌನ್ ಅವಧಿಯಲ್ಲಿ ಪೂರ್ತಿ ವೇತನ: ಕಂಪನಿಗಳ ವಿರುದ್ಧ ಕ್ರಮ ಬೇಡವೆಂದ ಸುಪ್ರೀಂ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

Supreme Court

ನವದೆಹಲಿ: ಲಾಕ್‌ಡೌನ್‌ ಅವಧಿಯಲ್ಲಿ ನೌಕರರಿಗೆ ಪೂರ್ಣ ವೇತನ ಪಾವತಿಸದಿರುವ ಖಾಸಗಿ ಕಂಪನಿಗಳ ವಿರುದ್ಧ ಜುಲೈ ಅಂತ್ಯದವರೆಗೂ ಯಾವುದೇ ಕ್ರಮ ಜರುಗಿಸಬಾರದು ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸಿತು.

ನ್ಯಾಯಮೂರ್ತಿಗಳಾದ ಅಶೋಕ್‌ ಭೂಷಣ್‌, ಸಂಜಯ್‌ ಕಿಶನ್‌ ಕೌಲ್‌, ಎಂ.ಆರ್.ಶಾ ಅವರಿದ್ದ ನ್ಯಾಯಪೀಠವು, ಉದ್ಯಮ ಮತ್ತು ನೌಕರರು ಪರಸ್ಪರ ಅವಲಂಬಿತರಾಗಿದ್ದು, ವೇತನ ಪಾವತಿ ಕುರಿತಂತೆ ಪರಸ್ಪರರು ಸಮಸ್ಯೆ ಬಗೆಹರಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟಿತು.

ಈ ಕುರಿತ ಆದೇಶದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಾ ಇಂಥ ಮಾತುಕತೆಗೆ ನೆರವಾಗಬೇಕು ಮತ್ತು ಸಂಬಂಧಿಸಿದ ಕಾರ್ಮಿಕ ಆಯುಕ್ತರಲ್ಲಿಯೂ ವರದಿ ದಾಖಲಾಗಬೇಕು ಎಂದು ಹೇಳಿತು.

ಇದನ್ನೂ ಓದಿ: 

ಲಾಕ್‌ಡೌನ್‌ ಅವಧಿಯಲ್ಲಿ ನೌಕರರಿಗೆ ಪೂರ್ಣವೇತನ ಪಾವತಿಸಬೇಕು ಎಂದು ಸೂಚಿಸಿ ಮಾರ್ಚ್‌ 29ರಂದು ಹೊರಡಿಸಿದ್ದ ಸುತ್ತೋಲೆಯ ಕ್ರಮಬದ್ಧತೆ ಕುರಿತಂತೆ ಹೆಚ್ಚುವರಿ ಪ್ರಮಾಣಪತ್ರ ದಾಖಲಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಆದೇಶಿಸಿತು.

ವಿವಿಧ ಕಂಪನಿಗಳು ಮಾರ್ಚ್ 29ರ ಸುತ್ತೋಲೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ನ್ಯಾಯಪೀಠವು ಜುಲೈ ಅಂತ್ಯಕ್ಕೆ ನಿಗದಿಪಡಿಸಿತು. ವೇತನ ಕುರಿತ ಹೊಂದಾಣಿಕೆಗೆ ಸಂಬಂಧಿಸಿದಂತೆ ಕಾರ್ಮಿಕ ಇಲಾಖೆಗಳ ಮೂಲಕ ಈ ಆದೇಶ ರವಾನಿಸಬೇಕು ಎಂದು ಸರ್ಕಾರಗಳಿಗೆ ಸೂಚಿಸಿತು.

ಕೇಂದ್ರ ಸರ್ಕಾರದ ಪರವಾಗಿ ಹಾಜರಿದ್ದ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್‌ ಅವರು, ಲಾಕ್‌ಡೌನ್‌ ಬಳಿಕ ಜನರು ವಲಸೆ ಹೋಗುತ್ತಿದ್ದಾರೆ. ಕಾರ್ಮಿಕರು ಕೆಲಸದ ಸ್ಥಳದಲ್ಲಿಯೇ ಉಳಿಯುವಂತೆ ಉತ್ತೇಜಿಸುವ ಕ್ರಮವಾಗಿ ಈ ಸುತ್ತೋಲೆ ಹೊರಡಿಸಿತ್ತು ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು