ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಭಯಾ ಪ್ರಕರಣ: ಮತ್ತೊಬ್ಬನ ಕ್ಷಮಾದಾನದ ಅರ್ಜಿ ತಿರಸ್ಕೃತ

Last Updated 29 ಜನವರಿ 2020, 7:27 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣದ ಮತ್ತೊಬ್ಬ ಆರೋಪಿಯ ಕ್ಷಮಾದಾನದ ಮನವಿಯನ್ನು ಸುಪ್ರೀಕೋರ್ಟ್ ಬುಧವಾರ ತಿರಸ್ಕರಿಸಿದ್ದು, ಮೂವರಿಗೆ ಫೆ.1ರ ಮರಣದಂಡನೆಗೆ ದಿನ ಸನ್ನಿಹಿತವಾಗಿದೆ.

ಪ್ರಕರಣದ ನಾಲ್ಕನೇ ಅಪರಾಧಿಅಕ್ಷಯ್ ಕುಮಾರ್ ಸಿಂಗ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಭಾನುಮತಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಅರ್ಜಿ ತಿರಸ್ಕರಿಸಿದ್ದು, ಕೇವಲ ಕಾರಾಗೃಹದಲ್ಲಿ ಅಪರಾಧಿಗೆ ಲೈಂಗಿಕ ಕಿರುಕುಳ ನೀಡಲಾಗಿತ್ತು ಎಂಬ ಅಂಶಗಳನ್ನು ಕ್ಷಮಾದಾನ ನೀಡಲು ಪರಿಗಣಿಸಲಾಗದು ಎಂದು ತಿಳಿಸಿದೆ.

ಅಪರಾಧಿ ಸಿಂಗ್ ತನಗೆ ಕ್ಷಮಾದಾನ ನೀಡಬೇಕೆಂದು ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ದ. ಆದರೆ, ಈ ಮನವಿ ತಿರಸ್ಕರಿಸಲಾಗಿತ್ತು. ರಾಷ್ಟ್ರಪತಿಗಳ ಮುಂದೆ ಅಪರಾಧಿ ಸಿಂಗ್‌ಗೆ ಕಾರಾಗೃಹದಲ್ಲಿ ನೀಡಲಾಗಿದ್ದ ಲೈಂಗಿಕ ಕಿರುಕುಳ ಕುರಿತು ಪ್ರಸ್ತಾಪಿಸಿರಲಿಲ್ಲ. ಈ ಕಾರಣಕ್ಕಾಗಿ ಅಪರಾಧಿಯ ಅರ್ಜಿಯನ್ನು ಪರಿಗಣಿಸಿ ಮರಣದಂಡನೆಯಿಂದಕ್ಷಮಾದಾನ ನೀಡಬೇಕೆಂದು ವಾದ ಮಂಡಿಸಲಾಗಿತ್ತು.

ಈಗಾಗಲೇ ಈ ಎಲ್ಲಾ ನ್ಯಾಯಾಲಯಗಳು ಎಲ್ಲಾಅಂಶಗಳ ಕುರಿತು ವಿಚಾರಣೆ ನಡೆಸಿವೆ. ಎಲ್ಲಾದಾಖಲೆ ಪತ್ರಗಳನ್ನು ನ್ಯಾಯಾಲಯಗಳಮುಂದೆ ಸಲ್ಲಿಸಲಾಗಿತ್ತು, ಆದ್ದರಿಂದ ಕ್ಷಮಾದಾನಕ್ಕೆ ಪರಿಗಣಿಸಲು ಹೊಸ ಅಂಶಗಳಿಲ್ಲ ಎಂದುಹೇಳಿದ ಸುಪ್ರೀಂ ಕೋರ್ಟ್ ಮನವಿ ತಿರಸ್ಕರಿಸಿದೆ.

ಪ್ರಕರಣದಲ್ಲಿ ನಾಲ್ಕು ಮಂದಿಅಪರಾಧಿಗಳಾದ ಮುಕೇಶ್ (32), ಪವನ್ ಗುಪ್ತಾ (25), ವಿನಯ್ ಶರ್ಮ (26) ಹಾಗೂ ಅಕ್ಷಯ್ ಕುಮಾರ್ ಸಿಂಗ್ (31)ರಿಗೆ ಮರಣದಂಡನೆ ವಿಧಿಸಲು ಫೆ.1ರಂದು ದಿನಾಂಕ ನಿಗದಿಪಡಿಸಲಾಗಿದೆ.

ಮತ್ತೊಂದು ಬೆಳವಣಿಗೆಯಲ್ಲಿ ಅಪರಾಧಿ ಅಕ್ಷಯ್ ಕುಮಾರ್ ಸಿಂಗ್ ಸುಪ್ರೀಂಕೋರ್ಟ್‌‌ಗೆ ಕ್ಯುರೇಟಿವ್ ಅರ್ಜಿಸಲ್ಲಿಸಿ ಕ್ಷಮಾದಾನ ನೀಡುವಂತೆ ಬೇಡಿಕೊಂಡಿದ್ದಾನೆ. ಈಗಾಗಲೇ ಅಪರಾಧಿಗಳಾದ ವಿನಯ್ ಹಾಗೂ ಮುಕೇಶ್ಸುಪ್ರೀಂಕೋರ್ಟ್‌‌ಗೆ ಸಲ್ಲಿಸಿದ್ದಕ್ಯುರೇಟಿವ್ ಅರ್ಜಿ ತಿರಸ್ಕಾರಗೊಂಡಿವೆ.

ಆರು ಮಂದಿ2012ರಲ್ಲಿ ಯುವತಿಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದರು, ತೀವ್ರ ಅಸ್ವಸ್ಥಳಾಗಿದ್ದ ಯುವತಿ ಚಿಕಿತ್ಸೆಫಲಕಾರಿಯಾಗದೆ ಸ್ವಲ್ಪ ದಿನಗಳ ನಂತರಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT