ದೇಶದಲ್ಲಿ ಹೆಚ್ಚಿದ ಅತ್ಯಾಚಾರ:ಸುಪ್ರೀಂ ಕೋರ್ಟ್‌ ಕಳವಳ

7
ಪ್ರತಿ 6 ಗಂಟೆಗೆ ಒಬ್ಬ ಮಹಿಳೆ ಮೇಲೆ ಅತ್ಯಾಚಾರ * ಮಾಧ್ಯಮಗಳಲ್ಲಿ ಸಂತ್ರಸ್ತರ ಚಿತ್ರ ಪ್ರಕಟಿಸದಂತೆ ತಾಕೀತು

ದೇಶದಲ್ಲಿ ಹೆಚ್ಚಿದ ಅತ್ಯಾಚಾರ:ಸುಪ್ರೀಂ ಕೋರ್ಟ್‌ ಕಳವಳ

Published:
Updated:

ನವದೆಹಲಿ: ದೇಶದಲ್ಲಿ ಪ್ರತಿ ಆರು ಗಂಟೆಗೆ ಒಬ್ಬ ಮಹಿಳೆಯ ಮೇಲೆ ಅತ್ಯಾಚಾರ ನಡೆಯುತ್ತಿವೆ ಎಂಬ ವರದಿಗಳ ಬಗ್ಗೆ ಸುಪ್ರೀಂ ಕೋರ್ಟ್ ಮಂಗಳವಾರ ತೀವ್ರ ಆತಂಕ ವ್ಯಕ್ತಪಡಿಸಿದೆ.

ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೊ (ಎನ್‌ಸಿಆರ್‌ಬಿ) ಪ್ರಕಟಿಸಿದ ದತ್ತಾಂಶಗಳ ಬಗ್ಗೆ ಪ್ರಸ್ತಾಪಿಸಿದ ಕೋರ್ಟ್, ಪ್ರತಿನಿತ್ಯ ದೇಶದ ಒಂದಿಲ್ಲ ಒಂದು ಕಡೆ ಮಹಿಳೆಯರು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದೆ.

2016ರಲ್ಲಿ ದೇಶದಲ್ಲಿ 38,947 ಮಹಿಳೆಯರ ಮೇಲೆ ಅತ್ಯಾಚಾರ ನಡೆದಿದೆ ಎಂಬ ವಿಷಯದ ಬಗ್ಗೆ ಗಮನ ಸೆಳೆದ ನ್ಯಾಯಮೂರ್ತಿ ಎಂ.ಬಿ. ಲೋಕೂರ್‌ ನೇತೃತ್ವದ ತ್ರಿಸದಸ್ಯ ಪೀಠ, ಈ ದೇಶದಲ್ಲಿ ಏನು ನಡೆಯುತ್ತಿದೆ ಎಂದು ಪ್ರಶ್ನಿಸಿದೆ.

ಚಿತ್ರ ಬಳಸದಂತೆ ತಾಕೀತು: ಅತ್ಯಾಚಾರ, ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರ ಚಿತ್ರಗಳನ್ನು ಪ್ರಕಟಿಸದಂತೆ ಮಾಧ್ಯಮಗಳಿಗೆ ಪೀಠ ಸೂಚಿಸಿದೆ.

ಸಂತ್ರಸ್ತರ ಸಂದರ್ಶನ ಬೇಡ:ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಅಪ್ರಾಪ್ತ ವಯಸ್ಸಿನ ಸಂತ್ರಸ್ತರನ್ನು ಮಾಧ್ಯಮಗಳ ಪ್ರತಿನಿಧಿಗಳು ಸಂದರ್ಶನ ಮಾಡುವುದಕ್ಕೂ ಕೋರ್ಟ್‌ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !