ಭಾನುವಾರ, ಆಗಸ್ಟ್ 25, 2019
24 °C

ಸುಷ್ಮಾ ಸ್ವರಾಜ್‌ ನಿಧನಕ್ಕೆ ಗಣ್ಯರ ಕಂಬನಿ

Published:
Updated:

ನವದೆಹಲಿ: ಕೇಂದ್ರದ ಮಾಜಿ ಸಚಿವೆ, ಬಿಜೆಪಿಯ ಹಿರಿಯ ನಾಯಕಿ ಸುಷ್ಮಾ ಸ್ವರಾಜ್‌ ಅವರ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ.

ಬುಧವಾರ ಬೆಳಗ್ಗೆ ಬಿಎಸ್‌ಪಿಯ ಮುಖ್ಯಸ್ಥೆ ಮಾಯಾವತಿ ಸುಷ್ಮಾ ಸ್ವರಾಜ್‌ ಅವರ ನಿವಾಸಕ್ಕೆ ತೆರಳಿ ಅಂತಿಮ ದರ್ಶನ ‍ಪಡೆದರು. ಸುಷ್ಮಾ ಸ್ವರಾಜ್‌ ದಕ್ಷ ರಾಜಕೀಯ ನಾಯಕಿ ಹಾಗೂ ಉತ್ತಮ ಸಂಸದೀಯಪಟುವಾಗಿದ್ದರು. ವೈಯಕ್ತಿಕವಾಗಿ ನಾನು ಅವರ ಉತ್ತಮ ಸ್ನೇಹಿತೆಯಾಗಿದ್ದೆ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ಮಾಯಾವತಿ ತಿಳಿಸಿದ್ದಾರೆ. 

ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌ ಸುಷ್ಮಾ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ. ಮಂಗಳವಾರ ಸಂಜೆ ನಾನು ಲೋಕಸಭೆಗೆ ಬಂದಾಗ ಸುಷ್ಮಾ ಅವರ ಟ್ವೀಟ್‌ ನೋಡಿದೆ ನಂತರ ಕೆಲವೇ ಗಂಟೆಗಳಲ್ಲಿ ಅವರ ನಿಧನದ ಸುದ್ದಿ ಬಂತು ಎಂದು ಕಣ್ಣಿರು ಹಾಕಿದರು. ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಹಿಂಪಡೆದ ಕೇಂದ್ರದ ನಿರ್ಧಾರದ ಕುರಿತು ಮಂಗಳವಾರ ಟ್ವೀಟ್‌ ಮಾಡಿದ್ದ ಸುಷ್ಮಾ ಅವರು ‘ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ನನ್ನ ಜೀವಮಾನದಲ್ಲಿ ಈ ದಿನವನ್ನು ನೋಡಲು ನಾನು ಬಹುದಿನಗಳಿಂದಲೂ ಕಾಯುತ್ತಿದೆ,’ ಎಂದು ಬರೆದುಕೊಂಡಿದ್ದರು.

Post Comments (+)