7
ಟ್ವಿಟರ್‌ನಲ್ಲಿ ಸುಷ್ಮಾ ಸ್ವರಾಜ್‌ ಟ್ರೋಲಿಂಗ್

ವಿದೇಶಾಂಗ ಸಚಿವೆಗೆ ಬೆಂಬಲ

Published:
Updated:

ನವದೆಹಲಿ: ಅಂತರ್‌ ಧರ್ಮೀಯ ದಂಪತಿಗೆ ಪಾಸ್‌ಪೋರ್ಟ್‌ ಪಡೆಯಲು ನೆರವಾಗಿದ್ದಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ಗೆ ಒಳಗಾಗಿದ್ದ ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್‌ ಅವರ ಬೆಂಬಲಕ್ಕೆ ಕೇಂದ್ರ ಸಚಿವ ರಾಜನಾಥ್‌ ಸಿಂಗ್ ನಿಂತಿದ್ದಾರೆ.

ತಮ್ಮ ಸಹೋದ್ಯೋಗಿಯ ಕ್ರಮ ಬೆಂಬಲಿಸಿ ಸಚಿವರೊಬ್ಬರು ಮಾತನಾಡಿರುವುದು ಇದೇ ಮೊದಲು. ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ದಂಪತಿಗೆ ಅವಮಾನ ಮಾಡಿದ್ದ ಲಖನೌ ಪಾಸ್‌ಪೋರ್ಟ್‌ ಸೇವಾ ಕೇಂದ್ರದ ಅಧಿಕಾರಿ ವಿಕಾಸ್‌ ಮಿಶ್ರಾ ಅವರನ್ನು ವರ್ಗಾವಣೆ ಮಾಡಿದ್ದ ನಂತರ ಸುಷ್ಮಾ ಟ್ರೋಲ್‌ಗೆ ಒಳಗಾಗಿದ್ದರು. 

ಮಮತಾ ಖಂಡನೆ (ಕೋಲ್ಕತ್ತ ವರದಿ): ‘ಸುಷ್ಮಾ ಹಿರಿಯ ರಾಜಕಾರಣಿ. ಹೀಗೆ ಕೆಟ್ಟ ಮಾತಿನಲ್ಲಿ ನಿಂದಿಸಬಾರದು’ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವೀಟ್‌ ಮಾಡಿದ್ದಾರೆ.

ಅತ್ಯಾಚಾರದ ಬೆದರಿಕೆ

ಮುಂಬೈ (ಪಿಟಿಐ): ತಮ್ಮ 10 ವರ್ಷದ ಪುತ್ರಿ ಮೇಲೆ ಅತ್ಯಾಚಾರದ ಬೆದರಿಕೆ ಒಡ್ಡಲಾಗಿದೆ ಎಂದು ಕಾಂಗ್ರೆಸ್ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ಇಲ್ಲಿನ ಪೊಲೀಸರಿಗೆ ಸೋಮವಾರ ದೂರು ಸಲ್ಲಿಸಿದ್ದಾರೆ. ಟ್ವಿಟರ್‌ನಲ್ಲಿ ಈ ಬೆದರಿಕೆ ಹಾಕಲಾಗಿದೆ. 

‘ಬೆದರಿಕೆ ಒಡ್ಡಿರುವ ವ್ಯಕ್ತಿ ತನ್ನ ಪ್ರೊಫೈಲ್‌ನಲ್ಲಿ ರಾಮನ ಚಿತ್ರ ಹಾಕಿಕೊಂಡಿದ್ದಾನೆ. ಆದರೆ ನನ್ನ ಪುತ್ರಿ ವಿರುದ್ಧ ಅತ್ಯಾಚಾರದ ಬೆದರಿಕೆ ಒಡ್ಡಲು ಅವನಿಗೆ ಯಾವುದೇ ಅಂಜಿಕೆ ಇಲ್ಲ’ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !