ನಿಮ್ಮಾಕೆಗೆ ಏಟು ಕೊಟ್ಟು ಬುದ್ದಿ ಕಲಿಸಿ: ಸುಷ್ಮಾ ಸ್ವರಾಜ್ ಪತಿಗೆ ಟ್ವೀಟ್ ಸಲಹೆ

7

ನಿಮ್ಮಾಕೆಗೆ ಏಟು ಕೊಟ್ಟು ಬುದ್ದಿ ಕಲಿಸಿ: ಸುಷ್ಮಾ ಸ್ವರಾಜ್ ಪತಿಗೆ ಟ್ವೀಟ್ ಸಲಹೆ

Published:
Updated:

ನವದೆಹಲಿ: 'ಆಕೆ ರಾತ್ರಿ ಮನೆಗೆ ಬಂದಾಗ ಏಟು ಕೊಟ್ಟು ಬುದ್ದಿ ಕಲಿಸಿ. ಮುಸ್ಲಿಂ ಸಮುದಾಯವನ್ನು ತೃಪ್ತಿ ಪಡಿಸುವ ಕೆಲಸವನ್ನು ನಿಲ್ಲಿಸುವಂತೆ ಆಕೆಗೆ ತಾಕೀತು ನೀಡಿ. ಮುಸ್ಲಿಮರು ಬಿಜೆಪಿಗೆ ಮತ ನೀಡುವುದಿಲ್ಲ ಎಂಬ ವಿಷಯವನ್ನು ಆಕೆಗೆ ಮನವರಿಕೆ ಮಾಡಿಕೊಡಿ' -ಮುಖೇಶ್ ಗುಪ್ತಾ ಎಂಬವರು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಪತಿ ಸ್ವರಾಜ್ ಕೌಶಲ್  ಅವರಿಗೆ ನೀಡಿದ ಟ್ವೀಟ್ ಸಲಹೆ ಇದು.

ಹಿಂದೂ ಮುಸ್ಲಿಂ ದಂಪತಿಗೆ ಅವಮಾನ ಮಾಡಿದ ಆರೋಪದಲ್ಲಿ ಲಖನೌ ಪಾಸ್‍ಪೋರ್ಟ್ ಸೇವಾ ಕೇಂದ್ರದ ಅಧಿಕಾರಿಯನ್ನು ವರ್ಗಾವಣೆ ಮಾಡಿ ದಂಪತಿಗೆ ನೆರವಾದುದಕ್ಕೆ ಸುಷ್ಮಾ ಸ್ವರಾಜ್ ಮೇಲೆ ಸೈಬರ್ ದಾಳಿ ನಡೆಯುತ್ತಲೇ ಇದೆ. ಈ ನಡುವೆ ತಮ್ಮನ್ನು ನಿಂದಿಸಿ ಪೋಸ್ಟ್ ಮಾಡಲಾಗಿರುವ ಟ್ವೀಟ್‍ಗಳ ಪೈಕಿ ಕೆಲವನ್ನು ಸುಷ್ಮಾ ಸ್ವರಾಜ್ ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದರು.

ಏನಿದು ಪ್ರಕರಣ?
12 ವರ್ಷಗಳ ಹಿಂದೆ ಸಿದ್ದಿಕಿ ಮತ್ತು ತನ್ವಿ ಸೇಥ್‌ ವಿವಾಹವಾಗಿದ್ದಾರೆ. ಜೂನ್ 20ರಂದು ಹೊಸ ಪಾಸ್‌ಪೋರ್ಟ್‌ ಪಡೆಯುವ ಸಂಬಂಧ ಇಲ್ಲಿನ ಕಚೇರಿಗೆ ತೆರಳಿದ್ದಾಗ ಮಿಶ್ರಾ ಅವರು ಅವಮಾನ ಮಾಡಿ ಪಾಸ್‌ಪೋರ್ಟ್‌ ಅರ್ಜಿಯನ್ನು ತಡೆಹಿಡಿದಿದ್ದರು ಎಂದು ದೂರಲಾಗಿತ್ತು.
’ಪತ್ನಿಗೆ ಹೊಸ ಪಾಸ್‌ಪೋರ್ಟ್‌ ಮತ್ತು ನನ್ನ ಪಾಸ್‌ಪೋರ್ಟ್‌ ನವೀಕರಣ ಮಾಡಿಸಿಕೊಳ್ಳಲು ತೆರಳಿದ್ದಾಗ ಈ ಅಹಿತಕರ ಘಟನೆ ನಡೆಯಿತು. ನನ್ನ ಧರ್ಮ ಮತ್ತು ಹೆಸರು ಬದಲಾಯಿಸಿಕೊಂಡರೆ ಮಾತ್ರ ಪಾಸ್‌ಪೋರ್ಟ್ ನೀಡುವುದಾಗಿ ಅಧಿಕಾರಿ ಹೇಳಿದ್ದರು ಎಂದು ಸಿದ್ದಿಕಿ ಆರೋಪಿಸಿದ್ದರು. ಈ ಆರೋಪ ತಮ್ಮ ಗಮನಕ್ಕೆ ಬಂದ ಕೂಡಲೇ ಸುಷ್ಮಾ ಸ್ವರಾಜ್ ಲಖನೌ ಪಾಸ್‍ಪೋರ್ಟ್ ಸೇವಾ ಕೇಂದ್ರದ ಅಧಿಕಾರಿಯನ್ನು ವರ್ಗಾವಣೆ ಮಾಡಿದ್ದರು.

ಇದನ್ನೂ ಓದಿ

ಸುಷ್ಮಾ ಸ್ವರಾಜ್‌ ಕಾನೂನಿಗಿಂತ ದೊಡ್ಡವರಲ್ಲ,: ಆರ್‌ಎಸ್‌ಎಸ್‌ ನಾಯಕ ರಾಜೀವ್‌ ತುಲಿ

ಹಿಂದೂ–ಮುಸ್ಲಿಂ ದಂಪತಿಗೆ ನೆರವಾಗಿದ್ದಕ್ಕೆ ಸುಷ್ಮಾ ವಿರುದ್ಧ ಅವಹೇಳನ

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !