ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ನಿಲ್ದಾಣದಲ್ಲಿ ಬಾಂಬ್‌ ಶಂಕೆ: ಪ್ರಯಾಣಿಕರಿಗೆ ನಿರ್ಬಂಧ

Last Updated 1 ನವೆಂಬರ್ 2019, 19:23 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 3ರಲ್ಲಿ ಗುರುವಾರ ಮುಂಜಾನೆ ಅನುಮಾನಾಸ್ಪದ ಬ್ಯಾಗ್‌ ಪತ್ತೆಯಾಗಿದ್ದರಿಂದ ಕೆಲಕಾಲ ಆತಂಕ ಮನೆಮಾಡಿತ್ತು. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಕ್ಕೆ ಬೆಳಿಗ್ಗೆಯೇಪ್ರಯಾಣಿಕರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.

ಕಪ್ಪು ಬಣ್ಣದ ಬ್ಯಾಗ್‌ನಲ್ಲಿ ಆರ್‌ಡಿಎಕ್ಸ್ ಸ್ಫೋಟಕ ಇದೆ ಎಂಬ ಶಂಕೆಹಿನ್ನೆಲೆಯಲ್ಲಿ ಕೇಂದ್ರೀಯ ಕೈಗಾರಿಕಾಭದ್ರತಾ ಪಡೆಗಳು (ಸಿಐಎಸ್‌ಎಫ್‌) ವಶಕ್ಕೆ ಪಡೆದು ಪರಿಶೀಲನೆ ನಡೆಸಿದವು ಎಂದು ಮೂಲಗಳು ತಿಳಿಸಿವೆ.

‘ಸಿಐಎಸ್ಎಫ್ ಸಹಾಯದಿಂದ ಚೀಲವನ್ನು ಬೇರೆಡೆಗೆ ಸ್ಥಳಾಂತರಿಸಲಾಯಿತು. ಅದನ್ನು ಇನ್ನೂ ತೆರೆಯಲಾಗಿಲ್ಲ. ಅದರೊಳಗೆ ಕೆಲವು ವಿದ್ಯುತ್ತಂತಿಗಳಿವೆ ಎಂಬ ಮಾಹಿತಿ ಇದೆ.ಆದರೂ ನಾವು ನಿಲ್ದಾಣದ ಭದ್ರತೆಯನ್ನು ಹೆಚ್ಚಿಸಿದ್ದೇವೆ’ ಎಂದುಪೊಲೀಸ್ ಆಯುಕ್ತ (ವಿಮಾನ ನಿಲ್ದಾಣ) ಸಂಜಯ್‌ ಭಾಟಿಯಾ ತಿಳಿಸಿದ್ದಾರೆ.

ಬ್ಯಾಗ್‌ನಲ್ಲಿ ಆರ್‌ಡಿಎಕ್ಸ್‌ ಇತ್ತು ಎಂಬ ಶಂಕೆ ಹಿನ್ನೆಲೆಯಲ್ಲಿ ಪೊಲೀಸ್ ಶ್ವಾನದ ಮೂಲಕ‍ಪರಿಶೀಲನೆ ನಡೆಸ
ಲಾಯಿತು. ಅದರೊಳಗೆ ಏನಿದೆ ಎಂಬುದರ ಮಾಹಿತಿ ಇನ್ನಷ್ಟೇ ಬರಬೇಕಿದೆ.

ಮೊದಲು ಆರ್‌ಡಿಎಕ್ಸ್ ಇದೆ ಎಂದು ಶಂಕೆ ವ್ಯಕ್ತವಾಗಿತ್ತು ಎಂದಿರುವ ಸಿಐಎಸ್‌ಎಫ್‌ನ ವಿಶೇಷ ನಿರ್ದೇಶಕ ಎಂ.ಎ. ಗಣಪತಿ, ಅಂತಿಮ ವರದಿ ಬಂದ ನಂತರ ತಿಳಿಸಲಾಗುವುದು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT