ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛ ಭಾರತ: ಸರ್ಕಾರದ ತಪ್ಪು ಮಾಹಿತಿ?

ಕೇಂದ್ರ ಮತ್ತು ಎನ್‌ಎಸ್‌ಎಸ್‌ಒ ಅಂಕಿಅಂಶದ ನಡುವೆ ಭಾರಿ ವ್ಯತ್ಯಾಸ
Last Updated 30 ನವೆಂಬರ್ 2019, 18:30 IST
ಅಕ್ಷರ ಗಾತ್ರ

ನವದೆಹಲಿ:2018ರ ಡಿಸೆಂಬರ್‌ ಅಂತ್ಯದ ವರೆಗೆ, ದೇಶದ ಗ್ರಾಮೀಣ ಪ್ರದೇಶದಲ್ಲಿನ ಕುಟುಂಬಗಳು ಹೊಂದಿರುವ ಶೌಚಾಲಯ ಸೌಲಭ್ಯದ ಬಗ್ಗೆ ನ್ಯಾಷನಲ್ ಸ್ಯಾಂಪಲ್‌ ಸರ್ವೆ ಆರ್ಘನೈಸೇಷನ್‌ (ಎನ್‌ಎಸ್‌ಎಸ್‌ಒ) ಈಚೆಗೆ ಸಮೀಕ್ಷಾ ವರದಿ ಬಿಡುಗಡೆ ಮಾಡಿದೆ.ಇದೇ ಅವಧಿಯಲ್ಲಿ ಗ್ರಾಮೀಣ ಪ್ರದೇಶದ ಕುಟುಂಬಗಳು ಹೊಂದಿರುವ ಶೌಚಾಲಯ ಸೌಲಭ್ಯದ ಬಗ್ಗೆ ಕೇಂದ್ರ ಸರ್ಕಾರ ನೀಡಿದ್ದ ಅಂಕಿ–ಅಂಶಕ್ಕೂ, ಸಮೀಕ್ಷಾ ವರದಿಯ ಅಂಕಿ–ಅಂಶಕ್ಕೂ ಭಾರಿ ವ್ಯತ್ಯಾಸವಿದೆ.

‘76ನೇ ಸುತ್ತಿನ ಕುಡಿಯುವ ನೀರು, ಶೌಚಾಲಯ, ನೈರ್ಮಲ್ಯ ಮತ್ತು ವಸತಿ ಸ್ಥಿತಿ ಸಮೀಕ್ಷೆ’ಯನ್ನು ಎನ್‌ಎಸ್‌ಎಸ್‌ಒ ಸೋಮವಾರವಷ್ಟೇ ಬಿಡುಗಡೆ ಮಾಡಿತ್ತು.2018ರ ಜುಲೈ–ಡಿಸೆಂಬರ್‌ ನಡುವೆ ಎನ್‌ಎಸ್‌ಎಸ್‌ಒ ಈ ಸಮೀಕ್ಷೆ ನಡೆಸಿತ್ತು. ಈ ಅವಧಿಯಲ್ಲಿ ದೇಶದ ಗ್ರಾಮೀಣ ಪ್ರದೇಶದ ಶೇ 71.30ರಷ್ಟು ಕುಟುಂಬಗಳು ಶೌಚಾಲಯ ಹೊಂದಿಲ್ಲ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಆದರೆ, ‘ದೇಶದ ಗ್ರಾಮೀಣ ಪ್ರದೇಶದ ಶೇ 97.64ರಷ್ಟು ಕುಟುಂಗಳು ಶೌಚಾಲಯ ಹೊಂದಿವೆ’ ಎಂದು 2018ರ ಡಿಸೆಂಬರ್‌ನಲ್ಲಿ ಕೇಂದ್ರ ಸರ್ಕಾರ ಹೇಳಿತ್ತು. 2018ರ ಡಿಸೆಂಬರ್ 24ರಂದು ರಾಜ್ಯಸಭೆಯಲ್ಲಿ ಅಂದಿನ ಸಚಿವ ರಮೇಶ್ ಜಿಗಜಿಗಣಿ ಈ ಮಾಹಿತಿ ನೀಡಿದ್ದರು.

ಕೇಂದ್ರ ಸರ್ಕಾರ ಮತ್ತು ಸಮೀಕ್ಷೆ ವರದಿಯ ಅಂಕಿ–ಅಂಶಗಳ ನಡುವೆ ಭಾರಿ ವ್ಯತ್ಯಾಸ ಇದೆ. ಹೀಗಾಗಿ ಇದರಲ್ಲಿ ಯಾವುದು ವಾಸ್ತವಕ್ಕೆ ಹತ್ತಿರ ಎಂಬ ಪ್ರಶ್ನೆ ಎದುರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT