ಸೋಮವಾರ, ಸೆಪ್ಟೆಂಬರ್ 27, 2021
22 °C

ಪತ್ತೆಯಾಗದ ಸ್ವಿಸ್‌ ಬ್ಯಾಂಕ್‌ ಹಣದ ವಾರಸುದಾರರು!

ಪಿಟಿಐ Updated:

ಅಕ್ಷರ ಗಾತ್ರ : | |

ಜೂರಿಚ್‌/ನವದೆಹಲಿ: ಸ್ವಿಸ್‌ ಬ್ಯಾಂಕ್‌ನ ಭಾರತೀಯರ ನಿಷ್ಕ್ರಿಯ ಖಾತೆಗಳಲ್ಲಿರುವ ಹಣದ ವಾರಸುದಾರರು ಯಾರು ಎಂಬುದು ಇದುವರೆಗೂ ಪತ್ತೆಯಾಗಿಲ್ಲ.

ಸದ್ಯದ ಮಾಹಿತಿಯಂತೆ ನಿಷ್ಕ್ರಿಯ ಖಾತೆಗಳಲ್ಲಿ ವಾರಸುದಾರರಿಲ್ಲದ ₹300 ಕೋಟಿ ಹಣ ಅನಾಥವಾಗಿ ಬಿದ್ದಿದೆ. ‘ವಾರಸುದಾರರಿಲ್ಲದ ಮತ್ತು ಸೂಕ್ತ ದಾಖಲೆಗಳಿಲ್ಲದ ನಿಷ್ಕ್ರಿಯ ಖಾತೆಗಳ ಪಟ್ಟಿ’ಯನ್ನು ಸ್ವಿಸ್‌ ಬ್ಯಾಂಕ್‌ ಪ್ರಕಟಿಸಿ ಮೂರು ವರ್ಷವಾಗಿದೆ. ಖಾತೆಗಳಲ್ಲಿರುವ ಹಣ ತಮ್ಮದೆಂದು ಹೇಳಿಕೊಂಡು ಯಾವ ಭಾರತೀಯರು ಅಗತ್ಯ ದಾಖಲೆಗಳನ್ನು ಸಲ್ಲಿಸಿಲ್ಲ.

ಭಾರತೀಯರಿಗೆ ಸೇರಿದ ನಿಷ್ಕ್ರಿಯ ಖಾತೆಗಳ ನಿಖರ ಮತ್ತು ಅಧಿಕೃತ ಮಾಹಿತಿ ಲಭ್ಯವಿಲ್ಲ. 2015ರ ಡಿಸೆಂಬರ್‌
ನಲ್ಲಿ ಸ್ವಿಸ್‌ ಬ್ಯಾಂಕ್‌ ಪ್ರಕಟಿಸಿದ ಸೂಕ್ತ ದಾಖಲೆಗಳಿಲ್ಲದ 3,500 ನಿಷ್ಕ್ರಿಯ ಬ್ಯಾಂಕ್‌ ಖಾತೆಗಳಲ್ಲಿ ಆರು ಖಾತೆ ಭಾರತೀಯರಿಗೆ ಸೇರಿವೆ. ಕೆಲವು ವಿದೇಶಿ ಕಂಪನಿಗಳ ಹೆಸರಿನಲ್ಲಿ ಭಾರತೀಯರು ಹಣ ಠೇವಣಿ ಮಾಡಿದ್ದಾರೆ. 

ಸ್ವಿಸ್‌ ನ್ಯಾಷನಲ್‌ ಬ್ಯಾಂಕ್‌ ಇತ್ತೀಚೆಗೆ ಬಿಡುಗಡೆ ಮಾಡಿದ ದಾಖಲೆಗಳ ಪ್ರಕಾರ 2017ರಲ್ಲಿ ಸ್ವಿಸ್‌ ಬ್ಯಾಂಕ್‌ ಖಾತೆಗಳಲ್ಲಿ ಭಾರತೀಯರ ಠೇವಣಿ ಹಣ ಶೇ 50ರಷ್ಟು (₹7,000) ಹೆಚ್ಚಾಗಿದೆ. ಸ್ವಿಸ್‌ ಬ್ಯಾಂಕ್‌ನಲ್ಲಿರುವ ಎಲ್ಲ ಹಣ ಕಪ್ಪುಹಣವಲ್ಲ ಎಂದು ಕೇಂದ್ರ ಸರ್ಕಾರ ಇತ್ತೀಚೆಗೆ ಸ್ಪಷ್ಟನೆ ನೀಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು