ಸಿಸ್ಟಂ ಸಮಸ್ಯೆ: ಇಂಡಿಗೊ ವಿಮಾನಯಾನ ಸೇವೆಯಲ್ಲಿ ವ್ಯತ್ಯಯ ನಿರೀಕ್ಷಿತ

7

ಸಿಸ್ಟಂ ಸಮಸ್ಯೆ: ಇಂಡಿಗೊ ವಿಮಾನಯಾನ ಸೇವೆಯಲ್ಲಿ ವ್ಯತ್ಯಯ ನಿರೀಕ್ಷಿತ

Published:
Updated:

ಬೆಂಗಳೂರು: ತಾಂತ್ರಿಕ ಕಾರಣಗಳಿಂದಾಗಿ ದೇಶದಾದ್ಯಂತ ಕಂಪ್ಯೂಟರ್‌ ಸಂಪರ್ಕ ವ್ಯವಸ್ಥೆ ಹಾಳಾಗಿದೆ ಎಂದು ಪ್ರಮುಖ ವಿಮಾನಯಾನ ಸಂಸ್ಥೆ ಇಂಡಿಗೊ ಭಾನುವಾರ ಪ್ರಕಟಿಸಿದೆ.  ಇದರಿಂದಾಗಿ ದೇಶದ ಬಹುತೇಕ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಬಹುದು ಎಂದು ಹೇಳಲಾಗಿದೆ.

‘ದೇಶದ ಎಲ್ಲ ವಿಮಾನ ನಿಲ್ದಾಣಗಳಲ್ಲಿ ನಮ್ಮ ಸಿಸ್ಟಂಗಳು ಸ್ಥಗಿತಗೊಂಡಿವೆ. ಕೌಂಟರ್‌ಗಳಲ್ಲಿ ಜನಸಂದಣಿ ಹೆಚ್ಚಾಗಬಹುದು ಎಂದು ನಿರೀಕ್ಷಿಸಿದ್ದೇವೆ. ನಿಮ್ಮ ಸಹನೆ ಮತ್ತು ಸಹಕಾರವನ್ನು ಬಯಸುತ್ತೇವೆ’ ಎಂದು ಇಂಡಿಗೊ ತನ್ನ ಟ್ವಿಟರ್ ಅಕೌಂಟ್‌ನಲ್ಲಿ ಪ್ರಕಟಿಸಿದೆ.

‘ಸಹಾಯಕ್ಕಾಗಿ ಟ್ವಿಟರ್‌ ಅಥವಾ ಫೇಸ್‌ಬುಕ್‌ನಲ್ಲಿ ಮೆಸೇಜ್ ಮಾಡಬಹುದು. http://www.goindigo.in ಜಾಲತಾಣದ ಮೂಲಕ ಚಾಟ್ ಮಾಡಬಹುದು. 01246173838 ಸಂಖ್ಯೆಗೆ ಕರೆಯನ್ನೂ ಮಾಡಬಹುದು ಎಂದು ಇಂಡಿಗೊ ಪ್ರಕಟಿಸಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !