ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಜಾಮುದ್ದೀನ್ ಪ್ರಕರಣ: ವೈದ್ಯಕೀಯ ಸಿಬ್ಬಂದಿ ಮೇಲೆ ಕಲ್ಲು ತೂರಾಟ

Last Updated 2 ಏಪ್ರಿಲ್ 2020, 19:39 IST
ಅಕ್ಷರ ಗಾತ್ರ

ನವದೆಹಲಿ:ಕಡ್ಡಾಯ ಗೃಹವಾಸದಲ್ಲಿರುವ ಕೆಲವರು ಆರೈಕೆಗಾಗಿ ಬಂದಿದ್ದ ವೈದ್ಯರು ಹಾಗೂ ಶುಶ್ರೂಷಕರನ್ನು ನಿಂದಿಸಿ ಅವರ ಮೇಲೆ ಉಗಿದಿದ್ದಾರೆ.

ನಿಜಾಮುದ್ದೀನ್ ಪ್ರದೇಶದಿಂದ ದೆಹಲಿ ಸರ್ಕಾರ ತೆರವುಗೊಳಿಸಿದ್ದವರ ಪೈಕಿ 170 ಜನರನ್ನು ತುಘಲ್‌ಬಾದ್‌ನಲ್ಲಿ ಎರಡು ಕಡೆ ಕಡ್ಡಾಯ ಗೃಹವಾಸದಲ್ಲಿ ಇರಿಸಲಾಗಿದೆ. ಅವರು ಬುಧವಾರವೈದ್ಯಕೀಯ ಸಿಬ್ಬಂದಿ ಹಾಗೂ ಅಧಿಕಾರಿಗಳ ಜತೆ ಜಗಳ ಮಾಡಿದ್ದು, ಉಗುಳಿದ್ದಾರೆ ಎಂದು ಉತ್ತರ ರೈಲ್ವೆಯ ಹಿರಿಯ ಅಧಿಕಾರಿ ದೀಪಕ್‌ ಕುಮಾರ್ ತಿಳಿಸಿದ್ದಾರೆ.

ಕಲ್ಲು ತೂರಾಟ: ಕೊರೊನಾ ಸೋಂಕು ತಪಾಸಣೆಗೆ ಬಂದಿದ್ದ ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ ಮೇಲೆ ಸ್ಥಳೀಯರು ಕಲ್ಲು ತೂರಾಟ ನಡೆಸಿ, ಸ್ಥಳದಿಂದ ಓಡಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್‌ನ ತಟಪಟ್ಟಿ ಬಖಲ್‌ನಲ್ಲಿ ನಡೆದಿದೆ. ಕಲ್ಲು ತೂರಾಟದಿಂದ ತಪ್ಪಿಸಿಕೊಳ್ಳಲು ಆಶಾ ಕಾರ್ಯಕರ್ತೆಯರು, ಶುಶ್ರೂಷಕರು ಸ್ಥಳದಿಂದ ಓಡಿದರು. ಈ ಸಂಬಂಧ ಎಂಟು ಜನರನ್ನು ಬಂಧಿಸಲಾಗಿದೆ.

ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್ ಚೌಹಾಣ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT