ಸೋಮವಾರ, ಏಪ್ರಿಲ್ 6, 2020
19 °C
ಕರ್ನಾಟಕ, ಆಂಧ್ರಪ್ರದೇಶ ಹಾಗೂ ಕೇರಳ ಗಡಿ ಬಂದ್

ತಮಿಳುನಾಡಿಗೆ ಪ್ರವೇಶವಿಲ್ಲ, ಗಡಿ ಮುಚ್ಚಿದ ಸರ್ಕಾರ

ಪಿಟಿಐ Updated:

ಅಕ್ಷರ ಗಾತ್ರ : | |

ಚೆನ್ನೈ: ಅಗತ್ಯ ವಸ್ತುಗಳ ಸರಬರಾಜು ಹೊರತುಪಡಿಸಿ ಗಡಿಯಲ್ಲಿರುವ ರಸ್ತೆಗಳ ಮೂಲಕ ತಮಿಳುನಾಡಿಗೆ ವಾಹನಗಳ ಪ್ರವೇಶಕ್ಕೆ ಮಾರ್ಚ್‌ 31ರವರೆಗೆ ಅವಕಾಶ ನೀಡದೇ ಇರಲು ತಮಿಳುನಾಡು ಸರ್ಕಾರ ನಿರ್ಧರಿಸಿದೆ. 

ಕರ್ನಾಟಕ, ಆಂಧ್ರಪ್ರದೇಶ ಹಾಗೂ ಕೇರಳದ ಗಡಿಯನ್ನು ಮುಂಜಾಗ್ರತಾ ಕ್ರಮವಾಗಿ ಮುಚ್ಚುವುದಾಗಿ ಶುಕ್ರವಾರ ಸರ್ಕಾರ ತಿಳಿಸಿದೆ. ಹಾಲು, ಪೆಟ್ರೋಲ್‌, ಡೀಸೆಲ್‌, ತರಕಾರಿ, ಔಷಧ, ಎಲ್‌ಪಿಜಿ ಸಿಲಿಂಡರ್‌ ಸರಬರಾಜು ವಾಹನಗಳಿಗಷ್ಟೇ ತಮಿಳುನಾಡು ಪ್ರವೇಶಕ್ಕೆ ಅವಕಾಶವಿರಲಿದೆ. ಕಾರ್ಗೊ ಟ್ರಕ್‌, ಆಂಬುಲೆನ್ಸ್‌ ಹಾಗೂ ಲಘು ಮೋಟಾರು ವಾಹನಗಳಲ್ಲಿ ಅನಿವಾರ್ಯ ಕಾರಣದ ನಿಮಿತ್ತ ಪ್ರಯಾಣಿಸುವವರಿಗೆ ಯಾವುದೇ ಅಡ್ಡಿ ಇಲ್ಲ. 

ಜನರಿಗೆ ಅನನುಕೂಲವಾಗದಂತೆ ನಿಗದಿತ ಸಂಖ್ಯೆಯ ಸರ್ಕಾರಿ ಬಸ್‌ಗಳನ್ನು ಸರ್ಕಾರ ಕಾರ್ಯಾಚರಣೆ ನಡೆಸಲಿದೆ. ಅಂತರ್‌ರಾಜ್ಯ ವಾಹನಗಳಲ್ಲಿ ಪ್ರಯಾಣಿಸುವ ಎಲ್ಲ ಪ್ರಯಾಣಿಕರು ಗಡಿಯಲ್ಲಿ ಕಡ್ಡಾಯವಾಗಿ ಆರೋಗ್ಯ ತಪಾಸಣೆಗೆ ಒಳಗಾಗಬೇಕು. ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಪ್ರಕಟಣೆಯಲ್ಲಿ ಸರ್ಕಾರ ತಿಳಿಸಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು