ಸೋಮವಾರ, ಸೆಪ್ಟೆಂಬರ್ 16, 2019
29 °C

‘ಲಜ್ಜಾ’ ಮುಂದುವರಿದ ಭಾಗ 2020ಕ್ಕೆ ಬಿಡುಗಡೆ

Published:
Updated:

ನವದೆಹಲಿ: ಲೇಖಕಿ ತಸ್ಲೀಮಾ ನಸ್ರೀನ್ ಅವರ ನಿಷೇಧಿತ ‘ಲಜ್ಜಾ’ ಪುಸ್ತಕದ ಮುಂದುವರಿದ ಭಾಗ 2020ಕ್ಕೆ ಬಿಡುಗಡೆ ಆಗಲಿದೆ. 

ಕೋಮು ಗಲಭೆಯ ನಂತರದ ಪರಿಣಾಮಗಳನ್ನು ಈ ಪುಸ್ತಕ ಒಳಗೊಂಡಿದ್ದು, ‌ಬಾಬರಿ ಮಸೀದಿ ಧ್ವಂಸದ ನಂತರ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳಿಗೆ ಎದುರಾದ ಪರಿಸ್ಥಿತಿಯನ್ನು ಪುಸ್ತಕದಲ್ಲಿ ಹಿಡಿದಿಡಲಾಗಿದೆ. 

ಕೋಮು ಸೌಹಾರ್ದಕ್ಕೆ ದಕ್ಕೆ ತರುತ್ತದೆ ಎಂದು ಈ ಪುಸ್ತಕಕ್ಕೆ ನಿಷೇಧ ಹೇರಲಾಗಿದೆ.

ಲಜ್ಜಾದ ಮುಂದುವರಿದ ಭಾಗವನ್ನು ಅರುನವಾ ಸಿನ್ಹಾ ತರ್ಜುಮೆ ಮಾಡಿದ್ದು, ಹಾರ್ಪರ್‌ಕಾಲಿನ್ಸ್‌ ಸಂಸ್ಥೆ ಪ್ರಕಟಿಸಲಿದೆ.

Post Comments (+)