ಭಾನುವಾರ, ನವೆಂಬರ್ 17, 2019
28 °C

ಲೇಖಕಿ ಶಾಂತಾ ಗೋಖಲೆ, ಕವಿ ಸಚ್ಚಿದಾನಂದನ್‌ಗೆ ಟಾಟಾ ಪ್ರಶಸ್ತಿ

Published:
Updated:

ಮುಂಬೈ: ಭಾರತೀಯ ಸಾಹಿತ್ಯ ವಲಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಲೇಖಕರಾದ ಶಾಂತಾ ಗೋಖಲೆ ಅವರಿಗೆ ‘ಟಾಟಾ ಲಿಟರೇಚರ್‌ ಲೈವ್‌ ಜೀವಮಾನ ಸಾಧನೆ ಪ್ರಶಸ್ತಿ–2019’  ಹಾಗೂ ಮಲಯಾಳಂ ಕವಿ ಕೆ. ಸಚ್ಚಿದಾನಂದನ್‌ ಅವರಿಗೆ ಈ ಬಾರಿಯ ಕಾವ್ಯ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.

ಇದೇ 14ರಿಂದ 17ರವರೆಗೆ ನಡೆಯಲಿರುವ ಮುಂಬೈ ಲಿಟ್‌ ಫೆಸ್ಟ್‌ನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. 14ರಂದು ಸಚ್ಚಿದಾನಂದನ್‌ ಮತ್ತು 17ರಂದು ಶಾಂತಾ ಗೋಖಲೆ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಲಿಟ್‌ಫೆಸ್ಟ್‌ನ ಸ್ಥಾಪಕ ಮತ್ತು ನಿರ್ದೇಶಕ ಅನಿಲ್‌ ಧಾರ್‌ಕರ್‌ ಹೇಳಿದ್ದಾರೆ.

 

ಪ್ರತಿಕ್ರಿಯಿಸಿ (+)