ರಾಜಕಾರಣದ ಬಗ್ಗೆ ಮಾಧ್ಯಮಗಳ ನಡೆ ಟೀಕಿಸಿದ ಸಚಿವ

7

ರಾಜಕಾರಣದ ಬಗ್ಗೆ ಮಾಧ್ಯಮಗಳ ನಡೆ ಟೀಕಿಸಿದ ಸಚಿವ

Published:
Updated:
Deccan Herald

ಮುಂಬೈ: ರಾಜಕಾರಣವನ್ನು ‘ಕೆಟ್ಟದ್ದು’ ಎಂದು ಮಾಧ್ಯಮಗಳು ಬಿಂಬಿಸುತ್ತವೆ ಎಂದು ದೂಷಿಸಿ ಮಹಾರಾಷ್ಟ್ರದ ಶಿಕ್ಷಣ ಸಚಿವ ವಿನೋದ್ ತಾವಡೆ ನೀಡಿರುವ ಹೇಳಿಕೆಗೆ ವಿರೋಧ ಪಕ್ಷಗಳಿಂದ ಆಕ್ಷೇಪ ವ್ಯಕ್ತವಾಗಿದೆ. 

ಇಲ್ಲಿನ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ತಾವಡೆ, ‘ನಿಮ್ಮಲ್ಲಿ ಎಷ್ಟು ಮಂದಿ ರಾಜಕಾರಣ ಸೇರಲು ಬಯಸುತ್ತೀರಿ’ ಎಂದು ಪ್ರಶ್ನಿಸಿದ್ದರು. 

ವಿದ್ಯಾರ್ಥಿಗಳಿಂದ ಇದಕ್ಕೆ ನಿರುತ್ಸಾಹದ ಪ್ರತಿಕ್ರಿಯೆ ವ್ಯಕ್ತವಾದಾಗ ತಾವಡೆ, ‘ರಾಜಕಾರಣ ಕೆಟ್ಟದ್ದು ಎನ್ನುವ ಅಭಿಪ್ರಾಯ ಮೂಡಿಸಲಾಗಿದೆ. ಕೆಲವು ರಾಜಕಾರಣಿಗಳ ಬೇಜವಾಬ್ದಾರಿಯುತ ವರ್ತನೆಯ ವಿಡಿಯೊಗಳನ್ನು ಮಾಧ್ಯಮಗಳು ಪ್ರಸಾರ ಮಾಡುವುದರಿಂದ ಈ ರೀತಿಯ ಅಭಿಪ್ರಾಯ ಉಂಟಾಗುತ್ತದೆ. ಮಾಧ್ಯಮಗಳು ಸತ್ಯವಾದ ವರದಿಗಳನ್ನು ತೋರಿಸುತ್ತವೆ ಎನ್ನುವುದರಲ್ಲಿ ಅನುಮಾನವಿಲ್ಲ ಎಂದಿದ್ದರು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !