ಭಾನುವಾರ, ಸೆಪ್ಟೆಂಬರ್ 19, 2021
29 °C

ಹೆಲಿಕಾಪ್ಟರ್‌‌ನಲ್ಲಿ ಕೂರುವ ಪತ್ನಿ ಆಸೆ ನಿವೃತ್ತಿ ದಿನ ಈಡೇರಿಸಿದ ಪತಿ

ಏಜನ್ಸಿಸ್‌ Updated:

ಅಕ್ಷರ ಗಾತ್ರ : | |

ಜೈಪುರ: ಆಕಾಶದಲ್ಲಿ ಹಾರಾಡುವ ಹೆಲಿಕಾಪ್ಟರ್ ನೋಡಿದ ಕೂಡಲೆ ಮಧ್ಯಮ ವರ್ಗದ ಜನರಿಗೆ 'ನಾವೂ ಒಂದು ದಿನ ಹೆಲಿಕಾಪ್ಟರ್‌ನಲ್ಲಿ ಕೂರಬೇಕು' ಎಂಬ ಆಸೆ ಮೂಡುವುದು ಸಹಜ. ಆದರೆ, ಆಸೆ ಈಡೇರಿಸಿಕೊಳ್ಳುವುದು ಸುಲಭದ ಮಾತಲ್ಲ.  ಆದರೆ, ಒಂದು ದಿನ ಇದ್ದಕ್ಕಿದ್ದಂತೆ ಹೆಲಿಕಾಪ್ಟರ್ ನಮ್ಮ ಮನೆಯ ಮುಂದೆಯೇ ನಮಗಾಗಿಯೇ ಬಂದು ನಿಂತರೆ....

ಶಿಕ್ಷಕಿಯೊಬ್ಬರ ಪಾಲಿಗೆ ಇಂತಹ ಆಸೆಯೊಂದು ಈಡೇರಿದೆ. ಘಟನೆ ನಡೆದಿರುವುದು ರಾಜಸ್ಥಾನದಲ್ಲಿ. ವ್ಯಕ್ತಿಯೊಬ್ಬ ಶಿಕ್ಷಕಿಯಾಗಿದ್ದ ಪತ್ನಿ ಹೆಲಿಕಾಪ್ಟರ್‌ನಲ್ಲಿ ಕೂರಬೇಕು ಎನ್ನುವ ಆಸೆಯನ್ನು ಆಕೆಯ ನಿವೃತ್ತಿಯ ದಿನ ಈಡೇರಿಸಿದ್ದಾನೆ.

ರಾಜಸ್ಥಾನದ ಮಾಲವಾಲಿ ಗ್ರಾಮದಲ್ಲಿ ಶನಿವಾರ ಜನರೋ ಜನ, ಇದ್ದಕ್ಕಿದ್ದಂತೆ ಯಾವತ್ತೂ ಬಾರದ ಹೆಲಿಕಾಪ್ಟರ್ ಅಲ್ಲಿ ಬಂದು ನಿಂತಿತ್ತು. ನೋಡಿದರೆ, ಆ ಗ್ರಾಮದ ರಮೇಶ್ ಚಂದ್ ಮೀನಾ. ಈತ ಸಾಂಪ್ರದಾಯಿಕ ವೇಷ ಭೂಷಣ ತೊಟ್ಟು, ಪತ್ನಿ ಹಾಗೂ ಮೊಮ್ಮಗನ ಜೊತೆ ಹೆಲಿಕಾಪ್ಟರ್ ನಲ್ಲಿ ಬಂದು ಮನೆಯ ಬಳಿ ಇಳಿದ. ಇದನ್ನು ನೋಡಿದ ಜನರು ಆಶ್ಚರ್ಯ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ರಮೇಶ್ ಚಂದ್ ಮೀನಾ 'ನನ್ನ ಪತ್ನಿ ಒಂದು ದಿನ ಆಕಾಶದಲ್ಲಿ ಹಾರಾಡುತ್ತಿದ್ದ ಹೆಲಿಕಾಪ್ಟರ್ ನೋಡಿ, ಹೆಲಿಕಾಪ್ಟರ್ ನಲ್ಲಿ ಕೂರಲು ಎಷ್ಟು ಹಣ ಖರ್ಚಾಗುತ್ತೆ, ಅದಕ್ಕೆ ಬಾಡಿಗೆ ಎಷ್ಟು ಎಂದು ಕೇಳಿದ್ದಳು. ಅದನ್ನ ಆಕೆ ನಿವೃತ್ತಿಯಾದ ದಿನ ಈಡೇರಿಸಿದ್ದೇನೆ.' ಎಂದಿದ್ದಾರೆ.

ಆಗಸ್ಟ್ 31 ಆಕೆಯ ಪತ್ನಿ ಕೆಲಸ ಮಾಡುವ ಕೊನೆಯ ದಿನ. ಆಕೆ ಶಾಲೆಯಿಂದ ಹೊರಡುವುದಕ್ಕೂ ಹೆಲಿಕಾಪ್ಟರ್ ಬಂದು ನಿಲ್ಲುವುದಕ್ಕೂ ಸಮಯ ಸರಿ ಹೊಂದುವಂತೆ ವ್ಯವಸ್ಥೆ ಮಾಡಲಾಗಿತ್ತು. ರಾಜಸ್ಥಾನ ಸರ್ಕಾರದಿಂದ ಕಾನೂನು ರೀತಿ ಯಾವ ದಾಖಲೆಗಳನ್ನು ಸಲ್ಲಿಸಬೇಕು, ಕಟ್ಟಬೇಕಾದ ಶುಲ್ಕ ಅವೆಲ್ಲವನ್ನೂ ಒದಗಿಸಿದ ರಮೇಶ್ ಚಂದ್ ಮೀನಾ ಹೆಲಿಕಾಪ್ಟರ್ ಬಾಡಿಗೆಯೂ ಸೇರಿದಂತೆ ಒಟ್ಟು ₹ 3.70 ಲಕ್ಷಗಳನ್ನು ದೆಹಲಿ ಮೂಲದ ಹೆಲಿಕಾಪ್ಟರ್ ಕಂಪನಿಗೆ ಪಾವತಿಸಿದ್ದರು. 

ಶಾಲೆಯಿಂದ ಪತ್ನಿ, ಮೊಮ್ಮಗ ಹಾಗೂ ತಾನೂ ಸೇರಿದಂತೆ ಮೂವರು ಮನೆಯವರೆಗೆ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಿದ್ದರು. ಇಷ್ಟು ದೂರ ಪ್ರಯಾಣಕ್ಕೆ 18 ನಿಮಷಗಳು ಬೇಕಾಯಿತು. ಹೆಲಿಕಾಪ್ಟರ್‌ನಲ್ಲಿ ಕುಳಿತ ಕ್ಷಣ ಜೀವನದಲ್ಲಿ ಮರೆಯಲಾರೆ, ಪತ್ನಿ ಹೆಲಿಕಾಪ್ಟರ್ ಒಂದನ್ನು ನೋಡಿದ ಮೇಲೆ ಅದರ ಬಾಡಿಗೆ ಎಷ್ಟು ಎಂದು ಕೇಳಿದ್ದಳು. ಅದಕ್ಕಾಗಿ ಇಷ್ಟೆಲ್ಲಾ ವ್ಯವಸ್ಥೆ ಮಾಡಿ ಆಕೆಯ ಆಸೆಯನ್ನು ಪೂರೈಸಿದ್ದೇನೆ. ಇಷ್ಟೆಲ್ಲಾ ವ್ಯವಸ್ಥೆಗಳು ಸರಾಗವಾಗಿ ನಡೆಯಲು ರಾಜಸ್ಥಾನ ಸರ್ಕಾರ ಸಹಾಯ ಮಾಡಿದೆ. ಇದಕ್ಕಾಗಿ ನಾನು ವಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು