ಗುರುವಾರ , ಆಗಸ್ಟ್ 22, 2019
27 °C

73ನೇ ಸ್ವಾತಂತ್ರ ದಿನ: ಟ್ವಿಟರ್‌ನಲ್ಲಿ ಶುಭ ಕೊರಿದ ಟೀಂ ಇಂಡಿಯಾ

Published:
Updated:

ಬೆಂಗಳೂರು: ವೆಸ್ಟ್‌ಇಂಡೀಸ್‌ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್‌ ತಂಡದ ಆಟಗಾರರು ಟ್ವಿಟರ್‌ನಲ್ಲಿ ವಿಡಿಯೊ ಮೂಲಕ ಶುಭಾಶಯ ತಿಳಿಸಿದ್ದಾರೆ.

ನಾಯಕ ವಿರಾಟ್‌ ಕೊಹ್ಲಿ, ಉಪ ನಾಯಕ ರೋಹಿತ್‌ ಶರ್ಮಾ ಸೇರಿದಂತೆ ಆಲ್‌ರೌಂಡರ್‌ಗಳಾದ ರವೀಂದ್ರ ಜಡೇಜಾ, ಕೇದಾರ್‌ ಜಾಧವ್‌, ಸ್ಪಿನ್ನರ್‌ ಯಜುವೇಂದ್ರ ಚಾಹಲ್‌, ಚೈನಾಮನ್‌ ಕುಲದೀಪ್‌ ಯಾದವ್‌, ಯುವ ಆಟಗಾರರಾದ ಶ್ರೇಯಸ್ ಅಯ್ಯರ್‌, ಖಲೀಲ್‌ ಅಹ್ಮದ್‌ ಹಾಗೂ ತಂಡದ ಕೋಚ್‌ ರವಿಶಾಸ್ತ್ರಿ ಅವರು ಶುಭಕೋರಿರುವ ವಿಡಿಯೊವನ್ನು ಬಿಸಿಸಿಐ ಟ್ವಿಟರ್‌ ಪೇಜ್‌ನಲ್ಲಿ ಹಂಚಿಕೊಂಡಿದೆ.

31 ಸೆಕೆಂಡ್‌ಗಳ ವಿಡಿಯೊ ಸಾಕಷ್ಟು ವೈರಲ್‌ ಆಗಿದ್ದು, ಬರೋಬ್ಬರಿ 54 ಸಾವಿರಕ್ಕೂ ಹೆಚ್ಚು ಜನರು ಲೈಕ್‌ ಮಾಡಿದ್ದಾರೆ. 6.9 ಕ್ಕಿಂತ ಹೆಚ್ಚು ಜನರು ರೀಟ್ವೀಟ್‌ ಮಾಡಿಕೊಂಡಿಕೊಂಡಿದ್ದಾರೆ.

ವಿಂಡೀಸ್‌ ವಿರುದ್ಧದ ಟಿ20 ಸರಣಿಯನ್ನು 3–0ಯಿಂದ ಕ್ಲೀನ್‌ ಸ್ವೀಪ್‌ ಮಾಡಿದ್ದ ಭಾರತ, ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2–0 ಅಂತರದ ಗೆಲುವು ಸಾಧಿಸಿದೆ. ಒಂದು ಪಂದ್ಯ ಮಳೆಯಿಂದ ರದ್ದಾಗಿತ್ತು. ಉಳಿದಂತೆ ಎರಡು ಪಂದ್ಯಗಳ ಟೆಸ್ಟ್‌ ಸರಣಿ ಆಗಸ್ಟ್‌ 26 ರಿಂದ ಆರಂಭವಾಗಲಿದೆ.

Post Comments (+)