ಗುಂಡೇಟಿಗೆ ಯುವಕ ಬಲಿ

ಶನಿವಾರ, ಏಪ್ರಿಲ್ 20, 2019
29 °C

ಗುಂಡೇಟಿಗೆ ಯುವಕ ಬಲಿ

Published:
Updated:

ಶ್ರೀನಗರ: ಉತ್ತರ ಕಾಶ್ಮೀರದ ಬಾರಾಮುಲ್ಲಾ ಸಂಸತ್‌ ಕ್ಷೇತ್ರದ ಮತದಾನ ಗುರುವಾರ ಮುಗಿಯುತ್ತಿದ್ದಂತೆ ಕುಪ್ವಾರ ಜಿಲ್ಲೆಯ ಲಾಂಗೇಟ್‌ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಘರ್ಷಣೆಯಲ್ಲಿ ಯುವಕನೊಬ್ಬ ಮೃತಪಟ್ಟಿದ್ದಾನೆ.

ಮಂಡಿಗಾಮ್‌ ಗ್ರಾಮದ ರಸ್ತೆಗಿಳಿದ ಯುವಕರು, ಭದ್ರತಾಪಡೆಗಳ ಜತೆ ಘರ್ಷಣೆಗೆ ಮುಂದಾದರು. ಪ್ರತಿಭಟನಾಕಾರರನ್ನು ನಿಯಂತ್ರಣಕ್ಕೆ ತರಲು ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದರು. ಪರಿಣಾಮ ಯುವಕನಿಗೆ ಗುಂಡು ತಾಗಿತು. ಮೃತನನ್ನು ಮಂಡಿಗಾಮ್‌ ನಿವಾಸಿ ಓವೈಸಿ ಮಿರ್‌ ಎಂದು ಗುರುತಿಸಲಾಗಿದೆ.

ಯುವಕನಿಗೆ ಚಿಕಿತ್ಸೆಗಾಗಿ ಹಂದ್ವಾರ ಜಿಲ್ಲಾ ಆಸ್ಪತ್ರೆಗೆ ತರಲಾಯಿತು. ದೇಹಕ್ಕೆ ಹಲವು ಕಡೆಗುಂಡು ತಾಗಿತ್ತು. ಅಷ್ಟು ಹೊತ್ತಿಗಾಗಲೇ ಮೃತಪಟ್ಟಿರುವುದನ್ನು ಘೋಷಿಸಲಾಯಿತು ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !