ಎರಡು ವರ್ಷದ ನಂತರ ಕುಟುಂಬದ ಮಡಿಲು ಸೇರಿದ ಬಾಲಕಿ

7

ಎರಡು ವರ್ಷದ ನಂತರ ಕುಟುಂಬದ ಮಡಿಲು ಸೇರಿದ ಬಾಲಕಿ

Published:
Updated:

ತೆಲಂಗಾಣ: ಎರಡು ವರ್ಷಗಳ ಹಿಂದೆ ಕಾಣೆಯಾಗಿದ್ದ ಬಾಲಕಿಯನ್ನು ಪುನಃ ಅವರ ಕುಟುಂಬದ ಮಡಿಲಿಗೆ ಒಪ್ಪಿಸುವಲ್ಲಿ ಸೈಬರಾಬಾದ್ ಪೊಲೀಸರು ಯಶಸ್ವಿಯಾಗಿದ್ದಾರೆ.

‘ಆಪರೇಷನ್ ಸ್ಮೈಲ್’ ಅಡಿಯಲ್ಲಿ ಪೊಲೀಸರು ಬಾಲಕಿಯ ಹುಡುಕಾಟ ಆರಂಭಿಸಿದ್ದರು.

ಸಂಧ್ಯಾ ಅಮ್ಮನ ಮಡಿಲು ಸೇರಿದ ಬಾಲಕಿ. ಈಕೆ 9 ವರ್ಷದವಳಿದ್ದಾಗ ಕುಕ್ಕಟ್ಪಲ್ಲಿ ಬಳಿಯ ವೆಂಕಟೇಶ್ವರ ದೇವಾಲಯದ ಬಳಿ ಕಾಣೆಯಾಗಿದ್ದಳು.

ಕೆಲವು ದಿನಗಳ ಹಿಂದೆ ಸರ್ಕಾರ ಅನುದಾನಿತ ಗೃಹಾಶ್ರಯಗಳನ್ನು ಪರಿಶೀಲನೆ ನಡೆಸುತ್ತಿದ್ದವು. ಆಗ ಈ ಬಾಲಕಿಯು ಅಲ್ಲಿ ವಾಸವಾಗಿರುವುದು ತಿಳಿಯಿತು. ವಿಚಾರಿಸಿದಾಗ ಮನೆಯ ಬಗ್ಗೆ ವಿವರ ನೀಡಿ ವಾಸವಿದ್ದ ಸ್ಥಳದ ವಿಳಾಸ ತೋರಿಸುವುದಾಗಿ ಹೇಳಿದಳು.

ಆದರೆ ಬಾಲಕಿಯನ್ನು ಕರೆದುಕೊಂಡು ಹೋಗುವಷ್ಟರಲ್ಲಿ ಆಕೆಯ ಕುಟುಂಬದವರು ಅಲ್ಲಿನ ಮನೆಯನ್ನು ತೊರೆದಿದ್ದರು. ಬಳಿಕ ಆ ಮನೆಯ ಮಾಲೀಕನ ಬಳಿ ಬಾಲಕಿಯ ಕುಟುಂಬದವರ ಫೋನ್‌ ನಂಬರ್ ಪಡೆದು ವಿಷಯ ಮುಟ್ಟಿಸಿ ಬಾಲಕಿಯನ್ನು ಮನೆಯವರಿಗೆ ಒಪ್ಪಿಸಿದ್ದೇವೆ ಎಂದು ಡಿಸಿಪಿ ಅನುರಾಧ ವಿವರಿಸಿದ್ದಾರೆ. 

Tags: 

ಬರಹ ಇಷ್ಟವಾಯಿತೆ?

 • 21

  Happy
 • 3

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !