ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಗುಲದ ನೀರು ನಿರಾಕರಣೆ: ದಲಿತರಿಂದ ಪ್ರತಿಭಟನೆ

ಉತ್ತರಪ್ರದೇಶ: ಅಸ್ಪೃಶ್ಯತೆ ಜೀವಂತ
Last Updated 28 ಜುಲೈ 2019, 18:54 IST
ಅಕ್ಷರ ಗಾತ್ರ

ಮುಜಪ್ಫರನಗರ: ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ದೇವಸ್ಥಾನವೊಂದರಲ್ಲಿ ಪೌರಕಾರ್ಮಿಕರಿಗೆ ಕುಡಿಯುವ ನೀರು ಕೊಡಲು ನಿರಾಕರಿಸಿದ ಕಾರಣ ಭಾನುವಾರ ದಲಿತರು ಪ್ರತಿಭಟನೆ ನಡೆಸಿದರು.

ಶಾಮ್ಲಿ ಜಿಲ್ಲೆಯ ಥಾನಾ ಭವನ ಪಟ್ಟಣದ ದೇವಸ್ಥಾನದ ಹೊರಗಡೆ ಪೌರಕಾರ್ಮಿಕರು ಚರಂಡಿಯನ್ನು ಸ್ವಚ್ಛಗೊಳಿಸಿದ್ದರು. ಕೆಲಸ ಮುಗಿಸಿದ ಬಳಿಕ, ಈ ಕಾರ್ಮಿಕರು ದೇವಸ್ಥಾನದ ಒಳಗಿದ್ದ ಕೊಳವೆಬಾವಿಯ ನೀರು ಕುಡಿಯಲು ಹೋದಾಗ ಅವರಿಗೆ ದೇವಸ್ಥಾನದೊಳಗೆ ಪ್ರವೇಶ ನಿರಾಕರಿಸಿದ ಅರ್ಚಕ, ಬಾಗಿಲು ಮುಚ್ಚಿದ ಎಂದು ಪೊಲೀಸರು ತಿಳಿಸಿದ್ದಾರೆ.

ವಾಲ್ಮೀಕಿ ಸಮುದಾಯಕ್ಕೆ ಸೇರಿದ್ದ ಈ ಪೌರಕಾರ್ಮಿಕರು ಅರ್ಚಕನ ವಿರುದ್ಧ ಪ್ರತಿಭಟನೆ ನಡೆಸಿ, ಎಫ್‌ಐಆರ್ ದಾಖಲಿಸುವಂತೆ ಪೊಲೀಸರಿಗೆ ಒತ್ತಾಯಿಸಿದರು. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರತಿಭಟನಾನಿರತರನ್ನು ಸಮಾಧಾನ ಪಡಿಸಿದ್ದು, ತನಿಖೆ ಪ್ರಗತಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT