ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶತ್ರು’ವಿನಿಂದ ಮೋದಿ ಪ್ರಶಂಸೆ

ಜಿ–7 ಶೃಂಗಸಭೆ ಉಲ್ಲೇಖಿಸಿ ಮೆಚ್ಚುಗೆ
Last Updated 27 ಆಗಸ್ಟ್ 2019, 17:03 IST
ಅಕ್ಷರ ಗಾತ್ರ

ಪಟ್ನಾ: ಕಾಂಗ್ರೆಸ್‌ ನಾಯಕ ಶತ್ರುಘ್ನ ಸಿನ್ಹಾ ಅವರು ಮೋದಿಯನ್ನುಪುನಃ ಪ್ರಶಂಸಿಸಿ ಮಂಗಳವಾರ ಟ್ವೀಟ್‌ ಮಾಡಿದ್ದಾರೆ.

ಸ್ವಾತಂತ್ರ್ಯೋತ್ಸವದ ದಿನ ಕೆಂಪುಕೋಟೆಯಿಂದ ಮೋದಿ ಅವರು ಮಾಡಿದ್ದ ಭಾಷಣಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಸಿನ್ಹಾ, ಜಿ–7 ಶೃಂಗಸಭೆಯಲ್ಲಿ ಟ್ರಂಪ್‌ ಜೊತೆಗೆ ಮೋದಿ ನಡೆಸಿದ್ದ ಮಾತುಕತೆಯ ಸಂದರ್ಭವನ್ನು ಉಲ್ಲೇಖಿಸಿ, ‘ನಿಮ್ಮ ಜಾದೂ ನಡೆಯಿತು’ ಎಂದು ಟ್ವೀಟ್‌ ಮಾಡಿದ್ದಾರೆ.

ಹಲವು ವರ್ಷಗಳ ಕಾಲ ಬಿಜೆಪಿಯ ಮುಂಚೂಣಿಯ ಮುಖಂಡರಾಗಿ ಗುರುತಿಸಿಕೊಂಡಿದ್ದ ಸಿನ್ಹಾ, 2019ರ ಲೋಕಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್‌ ಸೇರಿದ್ದರು. ಪಟ್ನಾಸಾಹಿಬ್‌ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿದ್ದರು.

‘ಜಿ–7 ಶೃಂಗಸಭೆಯಲ್ಲಿ ಏನಾಗುವುದೋ ಎಂದು ನಾವೆಲ್ಲರೂ ಉಸಿರು ಬಿಗಿಹಿಡಿದು ಕಾಯುತ್ತಿದ್ದೆವು. ನಿಮ್ಮ ರಾಜತಾಂತ್ರಿಕ ಕೌಶಲವು ಭಾರತ– ಅಮೆರಿಕ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕೆಲಸಮಾಡಿದೆ. ನಿಮ್ಮ ಜಾದೂ ನಡೆಯಿತು...’ ಎಂದು ಸಿನ್ಹಾ ಟ್ವೀಟ್‌ ಮಾಡಿದ್ದಾರೆ.

ಸಿನ್ಹಾ ಅವರ ಟ್ವೀಟ್‌ಗೆ ಬಿಹಾರದ ಬಿಜೆಪಿ ಮುಖಂಡ, ಉಪಮುಖ್ಯಮಂತ್ರಿ ಸುಶೀಲ್‌ ಮೋದಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಬಿಜೆಪಿಯಲ್ಲಿದ್ದಾಗ ಮೋದಿ ಮತ್ತು ಅಮಿತ್‌ ಶಾ ಅವರನ್ನು ಟೀಕಿಸುತ್ತಿದ್ದ ಸಿನ್ಹಾ, ಕಾಂಗ್ರೆಸ್‌ ಸೇರಿ, ಚುನಾವಣೆಯಲ್ಲಿ ಸೋತ ಬಳಿಕ ಬಣ್ಣ ಬದಲಿಸಿ ಅವರನ್ನು ಹೊಗಳುತ್ತಿದ್ದಾರೆ. ರಾಜಕೀಯ ನಿವೃತ್ತಿಗೆ ನಿಮಗಿದು ಒಳ್ಳೆಯ ಸಮಯ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT