ಹಾಸಿಗೆ ಹಿಡಿದಿದ್ದಾನೆ ಉಗ್ರ ಮಸೂದ್ ಅಜರ್!

7

ಹಾಸಿಗೆ ಹಿಡಿದಿದ್ದಾನೆ ಉಗ್ರ ಮಸೂದ್ ಅಜರ್!

Published:
Updated:
Deccan Herald

ನವದೆಹಲಿ: ಭಯೋತ್ಪಾದಕ ಕೃತ್ಯಗಳಲ್ಲಿ ಭಾರತಕ್ಕೆ ಬೇಕಿರುವ ಪಾಕಿಸ್ತಾನದ ಜೈಷೆ ಮೊಹಮ್ಮದ್ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ ಹಾಸಿಗೆ ಹಿಡಿದಿದ್ದಾನೆ ಎಂದು ಭಾರತದ ಗುಪ್ತಚರ ಮೂಲಗಳನ್ನು ಉಲ್ಲೇಖಿಸಿ ‘ಹಿಂದೂಸ್ತಾನ್ ಟೈಮ್ಸ್’ ವರದಿ ಮಾಡಿದೆ.

‘50 ವರ್ಷದ ಅಜರ್, ಕಳೆದ ಒಂದೂವರೆ ವರ್ಷಗಳಿಂದ ಬೆನ್ನುಮೂಳೆ ಮತ್ತು ಮೂತ್ರಪಿಂಡಕ್ಕೆ ಸಂಬಂಧಿಸಿದ ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿದ್ದಾನೆ. ರಾವಲ್ಪಿಂಡಿಯ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

ಮಸೂದ್ ಅನುಪಸ್ಥಿತಿಯಲ್ಲಿ ಆತನ ಸಹೋದರರಾದ ರವೂಫ್ ಅಸ್ಗರ್ ಮತ್ತು ಅಖ್ತರ್ ಇಬ್ರಾಹಿಂ ಭಾರತ ಮತ್ತು ಆಫ್ಗಾನಿಸ್ತಾನಗಳಲ್ಲಿ ದಾಳಿಗಳನ್ನು ನಡೆಸುತ್ತಿದ್ದಾರೆ.

2001ರಲ್ಲಿ ಸಂಸತ್ತಿನ ಮೇಲೆ ನಡೆದ ದಾಳಿ, 2016ರಲ್ಲಿ ಉರಿ ವಾಯುನೆಲೆ ಮೇಲಿನ ದಾಳಿ ಹಾಗೂ 2008ರ ಮುಂಬೈ ಭಯೋತ್ಪಾದಕರ ದಾಳಿಯಲ್ಲಿ ಮಸೂದ್ ಅಜರ್‌ನ ಕೈವಾಡವಿದೆ ಎಂದು ಭಾರತ ಆರೋಪಿಸಿದೆ. 1999ರ ಕಂದಹಾರ್ ವಿಮಾನ ಅಪಹರಣ ಪ್ರಕರಣದಲ್ಲಿ ಒತ್ತೆಯಾಳುಗಳ ಬಿಡುಗಡೆಗಾಗಿ ಅಜರ್‌ನನ್ನು ಅಂದಿನ ಸರ್ಕಾರ ಬಿಡುಗಡೆ ಮಾಡಿತ್ತು. 

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !