ಶನಿವಾರ, ಅಕ್ಟೋಬರ್ 19, 2019
28 °C

ಉಗ್ರರ ಭೀತಿ: ಉತ್ತರ ಭಾರತದಲ್ಲಿ ಕಟ್ಟೆಚ್ಚರ

Published:
Updated:

ನವದೆಹಲಿ: ಪಾಕಿಸ್ತಾನದ ನಾಲ್ವರು ಉಗ್ರರು ದೆಹಲಿಗೆ ನುಸುಳಿದ್ದಾರೆ ಎಂಬ ಗುಪ್ತಚರ ಮಾಹಿತಿಯ ಕಾರಣಕ್ಕೆ ರಾಷ್ಟ್ರ ರಾಜಧಾನಿಯಲ್ಲಿ ಗುರುವಾರ ಭದ್ರತೆ ಬಿಗಿಗೊಳಿಸಲಾಗಿದೆ. 

ಜೈಷ್‌ ಎ ಮೊಹಮ್ಮದ್‌ ಉಗ್ರಗಾಮಿ ಸಂಘಟನೆಯ ನಾಲ್ವರು ಉಗ್ರರು ನಗರಕ್ಕೆ ನುಸುಳಿದ್ದಾರೆ ಎಂಬ ಮಾಹಿತಿ ಬಂದಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. 

ದೆಹಲಿ ವಿಮಾನ ನಿಲ್ದಾಣ, ಮೆಟ್ರೊ ಮತ್ತು ಇತರ ಮಹತ್ವದ ಕೇಂದ್ರಗಳಿಗೆ ಭಾರಿ ಭದ್ರತೆ ಒದಗಿಸಲಾಗಿದೆ. ಹೆಚ್ಚು ಜನ ಸೇರುವ ಮಾರುಕಟ್ಟೆ, ಮಾಲ್‌ಗಳಂತಹ ಸ್ಥಳಗಳಲ್ಲಿಯೂ ಭದ್ರತೆ ಹೆಚ್ಚಿಸಲಾಗಿದೆ. ನೊಯಿಡಾ, ಉತ್ತರ ಪ್ರದೇಶದ ಗಾಜಿಯಾಬಾದ್‌ ಮತ್ತು ಹರಿಯಾಣದ ಗುರುಗ್ರಾಮ ಹಾಗೂ ಉತ್ತರ ಭಾರತದ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ.

Post Comments (+)