ಸೋಮವಾರ, ಫೆಬ್ರವರಿ 17, 2020
28 °C

ಉಗ್ರ ಸಂಘಟನೆ ಸೇರುವವರ ಸಂಖ್ಯೆ ಇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಗರ: ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ನಂತರ ಉಗ್ರ ಸಂಘಟನೆಗಳನ್ನು ಸೇರುತ್ತಿರುವ ಸ್ಥಳೀಯ ಯುವಕರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ ಎಂದು ವರದಿಯೊಂದು ಹೇಳಿದೆ.

‌ಜಮ್ಮು ಮತ್ತು ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಆಗಸ್ಟ್‌ 5ರ ನಂತರ ಪ್ರತಿ ತಿಂಗಳು ಉಗ್ರ ಸಂಘಟನೆಗೆ ಸೇರುವವರ ಸಂಖ್ಯೆ 5ಕ್ಕೆ ಇಳಿದಿದೆ. ಇದಕ್ಕೂ ಮುನ್ನ ಸಂಘಟನೆಗೆ ಸೇರುವವರ ಸಂಖ್ಯೆ 14ರಷ್ಟಿತ್ತು ಎಂದು  ಭದ್ರತಾ ಸಂಸ್ಥೆಗಳು ಸಿದ್ಧಪಡಿಸಿದ ವರದಿ ಹೇಳಿದೆ.

ಆಗಸ್ಟ್‌ 5 ಮತ್ತು 6ರ ನಂತರ ಉಗ್ರರ ಚಟುವಟಿಕೆಯ ಬೆಳವಣಿಗೆಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ಹತ್ಯೆಯಾದ ಉಗ್ರರ ಅಂತ್ಯಕ್ರಿಯೆಯಲ್ಲಿ ಸುಮಾರು ಹತ್ತು ಸಾವಿರ ಜನರು ಸೇರುತ್ತಿದ್ದರು. ಈಗ ಬೆರಳೆಣಿಕೆಯ ಸಂಬಂಧಿಗಳಷ್ಟೇ ಸೇರುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಭದ್ರತಾ ಪಡೆಗಳ ಕೈಗೆ ಸಿಕ್ಕಿ ಬಿದ್ದ ಉಗ್ರರು ತಮ್ಮ ಕುಟುಂಬ ಸದಸ್ಯರಿಗೆ ಕಳುಹಿಸುತ್ತಿದ್ದ ಕೊನೆಯ ಸಂದೇಶಗಳು ಅಥವಾ ಕೊನೆಯ ಬಾರಿಗೆ ಫೋನಿನಲ್ಲಿ ಮಾತನಾಡಿದ ಮಾತುಗಳು ಸ್ಥಳೀಯ ಯುವಕರು ಉಗ್ರ ಸಂಘಟನೆಗೆ ಸೇರುವಂತೆ ಪ್ರಚೋದಿಸುತ್ತಿದ್ದವು. ಆಗಸ್ಟ್‌ 5ರ ನಂತರ ಇಂಟರ್‌ನೆಟ್‌ ಹಾಗೂ ಮೊಬೈಲ್‌ ಕರೆ ಸೇವೆ ಸ್ಥಗಿತದಿಂದ ಅಂಥ ಉಗ್ರರ ಧ್ವನಿ(ಆಡಿಯೊ) ಸಂದೇಶಗಳ ಪ್ರಸರಣಕ್ಕೆ ಈಗ ಕಡಿವಾಣ ಬಿದ್ದಿದೆ.

ಭದ್ರತಾ ಪಡೆ ಹಾಗೂ ಉಗ್ರರ ನಡುವಿನ ಹೋರಾಟದ ಸಂದರ್ಭಗಳಲ್ಲಿ ನಡೆಯುತ್ತಿದ್ದ ಕಲ್ಲು ತೂರಾಟದಂತಹ ಘಟನೆಗಳು ವರದಿಯಾಗಿಲ್ಲ. ಇದರಿಂದಾಗಿ ಸಹಜವಾಗಿ ಆಶ್ರುವಾಯು, ರಬ್ಬರ್‌ ಗುಂಡು ಬಳಕೆ ಕಡಿಮೆಯಾಗಿದ್ದು, ಈ ವೇಳೆ ಆಗುತ್ತಿದ್ದ ಸಾವು–ನೋವುಗಳ ಸಂಖ್ಯೆಯೂ ಕಡಿಮೆಯಾಗಿದೆ. ಇದಕ್ಕೆ ಅಂತರ್ಜಾಲ ಸ್ಥಗಿತ ಮತ್ತು 370ನೇ ವಿಧಿ ರದ್ದು ಮಾಡಿದ ನಂತರದ ಬೆಳವಣಿಗೆ ಕಾರಣವಾಗಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು