ಶುಕ್ರವಾರ, ನವೆಂಬರ್ 22, 2019
27 °C

ದೆಹಲಿ ವಿಮಾನ ನಿಲ್ದಾಣ: ಕಡಿಮೆಯಾದ ಹೊಗೆ

Published:
Updated:

ದೆಹಲಿ: ದಟ್ಟ ಹೊಗೆಯಿಂದ ಕತ್ತಲು ಆವರಿಸಿದ್ದ ದೆಹಲಿ ವಿಮಾನ ನಿಲ್ದಾಣದಲ್ಲಿ ಸಂಜೆಯಾಗುತ್ತಿದ್ದಂತೆ ಕಡಿಮೆಯಾಗುತ್ತಿದೆ ಎಂದು ದೆಹಲಿ ವಿಮಾನ ನಿಲ್ದಾಣ ಪ್ರಾಧಿಕಾರ ಟ್ವೀಟ್ ಮಾಡಿದೆ.

ಬೆಳಿಗ್ಗೆ 9ರಿಂದ ಮಧ್ಯಾಹ್ನ 3ಗಂಟೆಯವರೆಗೆ ದಟ್ಟಹೊಗೆ ಆವರಿಸಿಕೊಂಡಿತ್ತು. 3 ಗಂಟೆಯ ನಂತರ ಪರಿಸ್ಥಿತಿ ತಿಳಿಯಾಗುತ್ತಿದೆ ಎನ್ನಲಾಗಿದೆ. ಇದರಿಂದಾಗಿ ಪ್ರಯಾಣಿಕರು ಸಂಬಂಧಪಟ್ಟ ವಿಮಾನಗಳ ಮುಂದಿನ ಬದಲಾವಣೆಗಾಗಿ ಸಂಸ್ಥೆಗಳ ಜೊತೆ ಸಂಪರ್ಕದಲ್ಲಿರುವಂತೆ ತಿಳಿಸಿದೆ. ಅಲ್ಲದೆ, ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದ್ದಕ್ಕೆ ವಿಷಾದ ವ್ಯಕ್ತಪಡಿಸುವುದಾಗಿ ಟ್ವಿಟರ್ ನಲ್ಲಿ ತಿಳಿಸಿದೆ.

ಇದನ್ನೂ ಓದಿ: ದೆಹಲಿಯಲ್ಲಿ ದಟ್ಟ ಹೊಗೆ: ವಿಮಾನ ಸಂಚಾರಕ್ಕೆ ಅಡ್ಡಿ, 32 ವಿಮಾನಗಳ ಮಾರ್ಗ ಬದಲಾವಣೆ

 

ಪ್ರತಿಕ್ರಿಯಿಸಿ (+)