ವಿಶ್ವಾಸಮತ ಗೆದ್ದ ಬ್ರಿಟನ್ ಪ್ರಧಾನಿ ಮೇ

7

ವಿಶ್ವಾಸಮತ ಗೆದ್ದ ಬ್ರಿಟನ್ ಪ್ರಧಾನಿ ಮೇ

Published:
Updated:
Deccan Herald

ಲಂಡನ್‌: ಬ್ರಿಟನ್‌ ಪ್ರಧಾನಿ ತೆರೆಸಾ ಮೇ ಅವರು ಬುಧವಾರ ನಡೆದ ನಿರ್ಣಾಯಕ ನಾಯಕತ್ವ ವಿಶ್ವಾಸಮತಯಾಚನೆಯಲ್ಲಿ ಗೆಲುವು ಸಾಧಿಸಿದ್ದಾರೆ. 200 ಮತಗಳು ಮೇ ಅವರ ಪರವಾಗಿ ಬಿದ್ದರೆ, ವಿರುದ್ಧವಾಗಿ 117 ಮತಗಳು ಚಲಾವಣೆಯಾಗಿದ್ದವು. ಮೇ ಅವರ ಕನ್ಸರ್ವೇಟಿವ್‌ ಪಕ್ಷದ 317 ಸಂಸದರು ಇದ್ದಾರೆ.

ಬ್ರಿಟನ್‌ ಹೌಸ್ ಆಫ್ ಕಾಮನ್ಸ್‌ನ ಸಂಸದೀಯ ಸಮಿತಿಗೆ ವಿರೋಧ ಪಕ್ಷದ 48 ಸಂಸದರು ಅವಿಶ್ವಾಸ ಗೊತ್ತುವಳಿ ಪತ್ರಗಳನ್ನು ಸಲ್ಲಿಸುವುದರೊಂದಿಗೆ ಬುಧವಾರ ಬೆಳಿಗ್ಗೆ ಮತ ಚಲಾವಣೆ ಆರಂಭವಾಗಿತ್ತು.

‘ಬೆಂಬಲ ನೀಡಿರುವುದಕ್ಕೆ ನಾನು ಚಿರಋಣಿಯಾಗಿದ್ದೇನೆ. ನನ್ನ ಪಕ್ಷದ ಸಾಕಷ್ಟು ಸದಸ್ಯರು ನನ್ನ ವಿರುದ್ಧವೇ ಮತ ಚಲಾವಣೆ ಮಾಡಿದ್ದಾರೆ ಮತ್ತು ಅವರು ಏನು ಹೇಳಿದ್ದಾರೆ ಎಂಬುದನ್ನು ನಾನು ಕೇಳಿಸಿಕೊಂಡಿದ್ದೇನೆ’ ಎಂದು ಮತಚಲಾವಣೆಯ ಫಲಿತಾಂಶ ಬಂದ ನಂತರ ಡೌನಿಂಗ್‌ ಸ್ಟ್ರೀಟ್‌ನಲ್ಲಿ ಮೇ ಪ್ರತಿಕ್ರಿಯಿಸಿದ್ದಾರೆ.

‘ಮತದಾನದ ಫಲಿತಾಂಶದ ನಂತರ ನಾವೀಗ ಬ್ರಿಟನ್‌ ಜನರಿಗಾಗಿನ ಬ್ರೆಕ್ಸಿಟ್ ಒಪ್ಪಂದ ಕುರಿತು ಗಮನಹರಿಸಬೇಕಾಗಿದೆ ಮತ್ತು ದೇಶಕ್ಕಾಗಿ ಉತ್ತಮ ಭವಿಷ್ಯ ನಿರ್ಮಿಸಬೇಕಿದೆ. ಬ್ರೆಕ್ಸಿಟ್‌ ಒಪ್ಪಂದದ ವಿವಾದಾತ್ಮಕ ಅಂಶಗಳ ಬಗ್ಗೆ ಐರೋಪ್ಯ ಒಕ್ಕೂಟದ ಜತೆ ಮಾತುಕತೆ ನಡೆಸುತ್ತೇನೆ’ ಎಂದು ಹೇಳಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !