ಬುಧವಾರ, ನವೆಂಬರ್ 20, 2019
21 °C

ತಿರುವಳ್ಳುವರ್‌ ಪ್ರತಿಮೆಗೆ ಸೆಗಣಿ ಬಳಿದು ಅಪಮಾನ

Published:
Updated:
Prajavani

ಚೆನ್ನೈ: ತಿರುವಳ್ಳುವರ್ ಅವರನ್ನು ಕೇಸರೀಕರಣಗೊಳಿಸುವ ಬಿಜೆಪಿ ಯತ್ನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆದಿರುವಂತೆಯೇ, ತಂಜಾವೂರು ಜಿಲ್ಲೆಯಲ್ಲಿ ತಮಿಳು ಕವಿಯ ಪ್ರತಿಮೆಯೊಂದಕ್ಕೆ ಸೆಗಣಿ ಎರಚಿ ವಿರೂಪಗೊಳಿಸಿರುವ ಘಟನೆ ಸೋಮವಾರ ನಡೆದಿದೆ.

ತಂಜಾವೂರಿನ ಪಿಳ್ಳಯಾರ್‌ಪಟ್ಟಿ ಪಂಚಾಯಿತಿ ವ್ಯಾಪ್ತಿಯಲ್ಲಿ 2005ರಲ್ಲಿ ಪ್ರತಿಮೆ ಅನಾವರಣಗೊಳಿಸಲಾಗಿತ್ತು. ಸೆಗಣಿಯನ್ನು ಬಳಿದಿರುವುದು ಸೋಮವಾರ ಬೆಳಿಗ್ಗೆ ಗೊತ್ತಾಗಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರತಿಮೆ ಸ್ವಚ್ಛಗೊಳಿಸಲು ಕ್ರಮಕೈಗೊಂಡರು. ಕಿಡಿಗೇಡಿಗಳ ಪತ್ತೆಗೆ ಕ್ರಮವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

 

 

ಪ್ರತಿಕ್ರಿಯಿಸಿ (+)